# ಪುತ್ತೂರು: ಕೆಲವೆಡೆ ನಾಳೆ(ಮೇ.21) ವಿದ್ಯುತ್‌ ನಿಲುಗಡೆ

- Link: https://hosakannada.com/news/puttutu-may-21st-power-cut/
- Published: 2026-05-20T10:03:51+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಮೇ 21 ರಂದು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ
5:30 ರವರೆಗೆ ಕಾಂಚನ, ಉಪ್ಪಿನಂಗಡಿ ಎಕ್ಸಪ್ರೆಸ್, ವಾಟ‌ರ್ ಸಪ್ಪೆ, ಉಪ್ಪಿನಂಗಡಿ ಓಲ್ಡ್ ಮತ್ತು ರಾಮಕುಂಜ
ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

Sponsored

ಆದುದರಿಂದ 110/33/11 ಕೆ ವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ಗಳಿಂದ
ವಿದ್ಯುತ್ ಸರಬರಾಜಾಗುವ ಕಾಂಚನ, ವಾಟ‌ರ್ ಸಪ್ಪೆ, ರಾಮಕುಂಜ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು,
ಶಾಂತಿನಗರ, ದಾರಂದಕುಕ್ಕು, ಬೆಳ್ಳಿಪ್ಪಾಡಿ, ಹಿರೇಬಂಡಾಡಿ ಮತ್ತು ಕೊಯಿಲ ವ್ಯಾಪ್ತಿಯ ವಿದ್ಯುತ್ ಬಳಕೆದಾರರು
ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Advertisement

Advertisement

Advertisement
