# ನೂತನವಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ವೈದ್ಯಕೀಯ ಕಾಲೇಜಿಗೆ ಲೋಗೋ, ಟ್ಯಾಗ್‌ಲೈನ್ ಆಹ್ವಾನ

- Link: https://hosakannada.com/news/putturu-medical-college-logo-tagline/
- Published: 2026-06-11T20:26:44+00:00
- Author: ಹೊಸಕನ್ನಡ ನ್ಯೂಸ್

ಪುತ್ತೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್‌ ಕುಮಾ‌ರ್ ರೈ ಅವರ ಕನಸಿನ ಮಹತ್ವಾಕಾಂಕ್ಷಿ
ಯೋಜನೆಯಾದ ‘ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ’ಗೆ ಸೂಕ್ತವಾದ ಲೋಗೋ ಹಾಗೂ 
ಟ್ಯಾಗ್‌ಲೈನ್ (ಧೈಯವಾಕ್ಯ) ವಿನ್ಯಾಸಗೊಳಿಸಲು ಸಾರ್ವಜನಿಕರಿಂದ ಸೃಜನಾತ್ಮಕ ಪ್ರಸ್ತಾಪಗಳನ್ನು ಆಹ್ವಾನಿಸಲಾಗಿದೆ.

Sponsored

ವೈದ್ಯಕೀಯ ಸೇವೆ. ಮಾನವೀಯತೆ, ಜ್ಞಾನ, ಸಂಶೋಧನೆ ಹಾಗೂ ಪುತ್ತೂರಿನ ಹೆಮ್ಮೆಯನ್ನು ಪ್ರತಿಬಿಂಬಿಸುವ
ರೀತಿಯಲ್ಲಿ ಸೃಜನಶೀಲ ಲೋಗೋ ಮತ್ತು ಟ್ಯಾಗ್‌ಲೈನ್‌ಗಳನ್ನು ರೂಪಿಸಬೇಕಾಗಿ ಕೋರಲಾಗಿದೆ.

Advertisement

Advertisement

ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 20,2026

ಸಲ್ಲಿಸಬೇಕಾದ ಸ್ಥಳ: ಶಾಸಕರ ಕಚೇರಿ, ಪುತ್ತೂರು.

ಸಲ್ಲಿಕೆಯ ಸ್ವರೂಪ: ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ಕಡ್ಡಾಯವಾಗಿ ಮುದ್ರಿತ (Print) ರೂಪದಲ್ಲಿ
ಮಾತ್ರ ಸಲ್ಲಿಸಬೇಕು.

ಸಂಪರ್ಕ ಸಂಖ್ಯೆ: ಹೆಚ್ಚಿನ ಮಾಹಿತಿಗಾಗಿ 9972589370 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಶೇಷ ಸೂಚನೆ: ಇದು ಯಾವುದೇ ಸ್ಪರ್ಧೆಯಲ್ಲ. ಪುತ್ತೂರಿನ ಭವಿಷ್ಯದ ಆರೋಗ್ಯ ಕ್ಷೇತ್ರದ ಮಹತ್ವದ ಯೋಜನೆಗೆ
ಸಾರ್ವಜನಿಕರ ಸೃಜನಾತ್ಮಕ ಕೊಡುಗೆಯನ್ನು ಆಹ್ವಾನಿಸುವ ಒಂದು ಮುಕ್ತ ಉಪಕ್ರಮವಾಗಿದೆ. ಆಯ್ಕೆಯಾಗುವ 
ಅತ್ಯುತ್ತಮ ವಿನ್ಯಾಸ ಮತ್ತು ಧೈಯವಾಕ್ಯಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಹಾಗೂ ಇದು ಆಸ್ಪತ್ರೆಯ
ಶಾಶ್ವತ ಗುರುತಾಗಿ ಉಳಿಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಪುತ್ತೂರಿನ ಆರೋಗ್ಯ ಭವಿಷ್ಯಕ್ಕೆ ನಿಮ್ಮ ಸೃಜನಶೀಲತೆಯ ಸ್ಪರ್ಶ ನೀಡಲು” ಆಸಕ್ತರು ಈ ಅಪೂರ್ವ ಅವಕಾಶವನ್ನು
ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

 

Advertisement
