# ಪುತ್ತೂರು: ಆಟೋರಿಕ್ಷಾದಲ್ಲಿ ಕರೆದೊಯ್ದು ಮಹಿಳೆಯ ಮಾನಭಂಗಕ್ಕೆ ಯತ್ನ, ದೂರು ದಾಖಲು

- Link: https://hosakannada.com/news/puttur-harassment-case-news/
- Published: 2022-03-29T15:57:18+00:00
- Author: ನಿಶ್ಮಿತಾ ಎನ್.

ಪುತ್ತೂರು: ಮಾತನಾಡಲು ಇದೆ ಎಂದು ಆಟೋ ರಿಕ್ಷಾವೊಂದರಲ್ಲಿ ಮಹಿಳೆಯನ್ನು
ಕರೆದೊಯ್ದು ಮಾನಭಂಗಕ್ಕೆ 
ಯತ್ನಿಸಿದಲ್ಲದೆ ಜೀವಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯ ವಿರುದ್ಧ ಪುತ್ತೂರು ಮಹಿಳಾ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsored

ಕುಟಿನೋಪಿನಡ್ಕ ನಿವಾಸಿ ಮಹಮ್ಮದ್ ಸಫ್ಘಾನ್ ಅವರು ಪರಿಚಯದ ಮಹಿಳೆಯೊಬ್ಬರನ್ನು ಮಾತನಾಡಲು ಇದೆ ಎಂದು
ಹೇಳಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪುತ್ತಿದ್ದಂತೆ ಮಹಿಳೆಯ
ಕುತ್ತಿಗೆ ಹಿಡಿದು
ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ್ದಾರೆ.

Advertisement

Advertisement

ಈ ಘಟನೆ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ
ಸೆಕ್ಷನ್ 354, 323, 504,506ರಂತೆ ಪ್ರಕರಣ ದಾಖಲಾಗಿದೆ.

Advertisement
