# ನ.15ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ

- Link: https://hosakannada.com/news/prime-minister-modi-to-bengaluru-on-the-15th/
- Published: 2026-10-28T08:35:09+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಿಎಂ
ಡಿಕೆ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ. ಪಿಂಕ್‌ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ
ಪಿಎಂ ಮೋದಿ. ಪಿಂಕ್‌ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ.

Sponsored

ಈ ಮಾರ್ಗವೂ ಒಟ್ಟು ಉದ್ದ ಸುಮಾರು 21.25 ಕಿ.ಮೀ ಇದ್ದು, ಒಟ್ಟು 18 ನಿಲ್ದಾಣಗಳಿದೆ. ಸದ್ಯ 7.5 ಕಿ.
ಮೀ. ಎತ್ತರಿಸಿದ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಈ ಎಲಿವೇಟೆಡ್ ಮೆಟ್ರೋ ಮಾರ್ಗವನ್ನು ಪ್ರಧಾನಿಗಳು
ಉದ್ಘಾಟನೆ ಮಾಡಲಿದ್ದಾರೆ. ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗ ಕಾಮಗಾರಿಯಲಿದ್ದು, ಈ ಮಾರ್ಗ
ಮುಂದಿ ವರ್ಷ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಡೈರಿ ಸರ್ಕಲ್‌ನಿಂದ ನಾಗವಾರ, ಶಿವಾಜಿನಗರ ಹಾಗೂ ಕಂಟೋನ್ಮೆಂಟ್
ಮೂಲಕ ನಾಗವಾರ ವರೆಗೂ ಸಂಪರ್ಕ ಕಲ್ಪಿಸಲಿದೆ.

Advertisement

Advertisement

Advertisement
