# SSLC results: ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಪ್ರದೀಪ್‌ ಈಶ್ವರ್‌ ಹೊಸ ಅಸ್ತ್ರ

- Link: https://hosakannada.com/news/pradeep-eshwar-is-the-new-weapon-for-sslc-results/
- Published: 2024-10-20T09:59:12+00:00
- Author: ಕಾವ್ಯ ವಾಣಿ

**SSLC results: ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಪಂಚಾಯಿತಿ
ಸಭಾಂಗಣದಲ್ಲಿ ಕರೆದಿದ್ದ ಪ್ರೌಢಶಾಲಾ ಶಿಕ್ಷಕರ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರದೀಪ್‌
ಈಶ್ವರ್‌ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ (SSLC results) ಪಡಿಸಲು ಹೊಸ ಮಾಸ್ಟರ್‌ ಪ್ಲಾನ್‌
ರೂಪಿಸಿರುವುದಾಗಿ ವಿವರಿಸಿದ್ದಾರೆ.**

Sponsored

**ಈಗಾಗಲೇ ಎಸ್ಸೆಸ್ಸೆಲ್ಸಿ ಸರಣಿ ಟೆಸ್ಟ್ 2023- 24 ಎಂಬ ಹೆಸರಿನಲ್ಲಿ ಪ್ರಶ್ನೆ ಪತ್ರಿಕೆ ತಯಾರಾಗುತಿದ್ದು,
ಈ ಸರಣಿ ಟೆಸ್ಟ್‌ನಿಂದ ವಿದ್ಯಾರ್ಥಿಗಳು ಪ್ರತಿದಿನ ತಾವು ಮರೆತಿರುವ ವಿಷುಯಗಳ ನೆನಪು ಮಾಡಿಕೊಂಡು 
ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗೆ ಉತ್ತಮ ಸಿದ್ಧತೆ ನಡೆಸಲು ಸಹಾಯವಾಗುತ್ತದೆ.****

Advertisement

Advertisement

**ಮುಖ್ಯವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಗೆ ಅನ್ವಯವಾಗುವಂತೆ ತಯಾರಾಗುವ ಪ್ರಶ್ನೆ ಪತ್ರಿಕೆಗಳ
ಮುದ್ರಣಕ್ಕೆ ಅಂದಾಜು 16 ಲಕ್ಷ ರು.ಗಳವರೆಗೂ ಖರ್ಚಾಗಬಹುದು. ಈ ಅನುಕೂಲು ಕ್ಷೇತ್ರದ 24 ಪ್ರೌಢಶಾಲೆಗಳ
ಸುಮಾರು 4000 ಮಕ್ಕಳಿಗೆ ಸಿಗುತ್ತಿದ್ದು, ಪರೀಕ್ಷೆ ನಡೆಯುವ ಎಲ್ಲಾ ಶಾಲೆಗಳಿಗೂ ಸಿಸಿ ಕ್ಯಾಮರ ಅಳವಡಿಕೆ
ಮಾಡಲಾಗುವುದು. ಮತ್ತು ನವೆಂಬರ್ 4 ರಿಂದ ಪ್ರತಿದಿನ ನಡೆಯುವ 48 ಟೆಸ್ಟ್ ಗಳು ಡಿಸೆಂಬರ್ ತಿಂಗಳ ಅಂತ್ಯಕ್ಕೆ
ಮುಗಿಯಲಿವೆ ಎಂದಿದ್ದಾರೆ.****

Advertisement
