# ಮುಳಿಯ ಪ್ರತಿಷ್ಠಾನದಿಂದ ‘ಧನಾತ್ಮಕ ಪೋಷಕತ್ವ’ ಆನ್‌ಲೈನ್ ಕಾರ್ಯಕ್ರಮ

- Link: https://hosakannada.com/news/positive-parent-online-program-by-muliya-foundation/
- Published: 2026-08-12T16:29:56+00:00
- Author: ಹೊಸಕನ್ನಡ ನ್ಯೂಸ್

ಮುಳಿಯ ಫೌಂಡೇಶನ್ ಹಾಗೂ ಮುಳಿಯ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಬೆಂಗಳೂರಿನ 81ಕ್ಕೂ ಹೆಚ್ಚು ಶಾಲೆಗಳಲ್ಲಿ
ಆಯೋಜಿಸಲಾಗುತ್ತಿರುವ ‘ಧನಾತ್ಮಕ ಪೋಷಕತ್ವ’ ವಿಚಾರಸಂಕಿರಣ ಸರಣಿಯ ಉದ್ಘಾಟನಾ ಕಾರ್ಯಕ್ರಮವು ಆನ್‌ಲೈನ್
ಮೂಲಕ ನಡೆಯಲಿದೆ.

Sponsored

ಪೋಷಕರು ಮತ್ತು ಮಕ್ಕಳನ್ನು ತಲುಪುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ
ಖ್ಯಾತ ನಟ, ಚಿಂತಕ ಹಾಗೂ ಪ್ರೇರಣಾದಾಯಕ ಮಾತುಗಾರ ರಮೇಶ್ ಅರವಿಂದ್ ಅವರು ಭಾಗವಹಿಸಿ, ಮಕ್ಕಳ ಬೆಳವಣಿಗೆ,
ಪೋಷಕರ ಜವಾಬ್ದಾರಿ ಹಾಗೂ ಮಕ್ಕಳೊಂದಿಗೆ ಸಕಾರಾತ್ಮಕ ಸಂಬಂಧ ಬೆಳೆಸುವ ಕುರಿತು ಉಪಯುಕ್ತ ವಿಚಾರಗಳನ್ನು
ಹಂಚಿಕೊಳ್ಳಲಿದ್ದಾರೆ.

Advertisement

Advertisement

ಕಾರ್ಯಕ್ರಮದ ವಿವರ

ದಿನಾಂಕ: ಗುರುವಾರ, 13 ಆಗಸ್ಟ್ 2026
 ಲಾಗಿನ್ ಸಮಯ: ಸಂಜೆ 6:15 ಕಾರ್ಯಕ್ರಮದ ಸಮಯ: ಸಂಜೆ 6:30ರಿಂದ
7:30ರವರೆಗೆ ಮಾಧ್ಯಮ: Zoom – ಸಂಪೂರ್ಣ ಆನ್‌ಲೈನ್ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂಗಡವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಕೆಳಗಿನ
Zoom ಲಿಂಕ್ ಬಳಸಬಹುದು:
 [https://us06web.zoom.us/meeting/register/9zA1g1FaT2mZ_JB1DzfCgg](https://us06web.zoom.us/meeting/register/9zA1g1FaT2mZ_JB1DzfCgg)

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ತಮ್ಮ ಹೆಸರು ಹಾಗೂ ಇತರ ಅಗತ್ಯ ಮಾಹಿತಿಯೊಂದಿಗೆ
8123643916 ಸಂಖ್ಯೆಗೆ WhatsApp ಮೂಲಕ ಕಳುಹಿಸಬಹುದು.

ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಮುಳಿಯ ಜ್ಯುವೆಲ್ಸ್‌ನ ಅಧಿಕೃತ YouTube ಚಾನೆಲ್‌ನಲ್ಲಿಯೂ
ಅವಕಾಶ ಕಲ್ಪಿಸಲಾಗಿದೆ:

YouTube:
 [https://www.youtube.com/@muliyajewels/streams](https://www.youtube.com/@muliyajewels/streams)

ಪೋಷಕರಲ್ಲಿ ಮಕ್ಕಳೊಂದಿಗೆ ಉತ್ತಮ ಸಂವಹನ, ಅರ್ಥಪೂರ್ಣ ಸಂಬಂಧ ಹಾಗೂ ಸಕಾರಾತ್ಮಕ ಪೋಷಕತ್ವದ ಮನೋಭಾವವನ್ನು
ಬೆಳೆಸುವ ಉದ್ದೇಶದಿಂದ ಈ ವಿಚಾರಸಂಕಿರಣ ಸರಣಿಯನ್ನು ಆಯೋಜಿಸಲಾಗಿದೆ ಎಂದು ಕೇಶವ ಪ್ರಸಾದ್ ಮುಳಿಯ 
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement
