# ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

- Link: https://hosakannada.com/news/poll-officer-reena-dwivedi/
- Published: 2022-02-23T14:39:41+00:00
- Author: ಹೊಸಕನ್ನಡ ನ್ಯೂಸ್

ಉತ್ತರಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ. ತುಂಬಾ ಜನರಿಗೆ ಈ ಹೆಸರು
ನೆನಪಿರಬಹುದು. 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ
ಭಾರೀ ಸುದ್ದಿ ಮಾಡಿದಂತಹ ಮಹಿಳೆ.

Sponsored

2019 ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಯಾವುದೇ ಸೆಲೆಬ್ರಿಟಿಗಿಂತಲೂ ಕಮ್ಮಿಯಿಲ್ಲದಂತೆ ಡ್ರೆಸ್ 
ಮಾಡಿಕೊಂಡು ಬಂದಿದ್ದ ಈಕೆ ಮುಗುಳುನಗುತ್ತಾ ಕೂಲಿಂಗ್ ಗ್ಲಾಸ್ ಧರಿಸಿ ಮತಪೆಟ್ಟಿಗೆಯೊಂದಿಗೆ ಸ್ಮೈಲ್
ಕೊಟ್ಟು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು ಈ 
ಫೋಟೋ.

Advertisement

Advertisement

![](https://hosakannada.com/wp-content/uploads/2022/02/IMG_20220223_142849.jpg)

ಇಂದು ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ 4 ನೇ ಹಂತದ ಮತದಾನ ನಡೆಯುತ್ತಿದ್ದಲ್ಲಿಗೆ ನಿನ್ನೆ ಮತಪೆಟ್ಟಿಗೆಯೊಂದಿಗೆ
ಬಂದಿದ್ದ ರೀನಾ ದ್ವಿವೇದಿ ಈ ಬಾರಿ ಕೂಡಾ ಸಖತ್ ಮಿಂಚಿಂಗ್. ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

![](https://hosakannada.com/wp-content/uploads/2022/02/IMG_20220223_143842.jpg)

ಈ ಬಾರಿ ತುಂಬಾ ಸ್ಟೈಲಿಷ್ ಆಗಿ ತೋಳಿಲ್ಲದ ಕಪ್ಪು ಟಾಪ್ ಮತ್ತು ಬೀಜ್ ಪ್ಯಾಂಟ್. ಅವರ ಈ ಸುಂದರತೆಗೆ
ಎಲ್ಲರೂ ಮನಸೋತಿದ್ದಾರೆ‌. ಒಟ್ಟಾರೆ ಎಲ್ಲರ ದೃಷ್ಟಿ ರೀನಾ ಮೇಲೆ ನೆಟ್ಟಿದೆ.

ರೀನಾ ದ್ವಿವೇದಿಯವರು ಲಕ್ನೋದಲ್ಲಿ ಲೋಕೋಪಯೋಗಿ ಇಲಾಖೆ ಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂದು ನಡೆಯುತ್ತಿರುವ 4 ನೇ ಹಂತದ ಮತದಾನದಲ್ಲಿ ಮೊಹನ್ಸಾಲ್ ಗಂಜ್ ಮತಗಟ್ಟೆ ಕೇಂದ್ರದ ಬಸ್ತಿಯಾನ್ 
ಗೊಸೈಗಂಜ್ 114 ಎಂಬಲ್ಲಿ ಮತಗಟ್ಟೆ ಅಧಿಕಾರಿಯಾಗಿ ಡ್ಯೂಟಿ ಮಾಡುತ್ತಿದ್ದಾರೆ.

![](https://hosakannada.com/wp-content/uploads/2022/02/IMG_20220223_142828.jpg)

ನಿನ್ನೆ ಸಾಯಂಕಾಲ ಆಶಿಯಾನ ಮತಕೇಂದ್ರದ ಸ್ಮೃತಿ ಉಪವನಕ್ಕೆ ಬಂದ ಕೂಡಲೇ ಅಲ್ಲಿದ್ದ ಹಲವು ಪೊಲೀಸರು 
ಮತ್ತು ಪಾರಾ ಮಿಲಿಟರಿ ಪಡೆ ಸಿಬ್ಬ ರೀನಾ ದ್ವಿವೇದಿಯವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

Advertisement
