# ಪಿಎಂ ಕಿಸಾನ್‌ ಸ್ಕೀಂ: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್

- Link: https://hosakannada.com/news/pm-kisan-scheme-date-fixed-for-releasing-the-24th-installment/
- Published: 2026-10-29T10:06:19+00:00
- Author: ಹೊಸಕನ್ನಡ ನ್ಯೂಸ್

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ
ಸರ್ಕಾರವು ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ. 24ನೇ ಕಂತಿನ ರೂ.2,000 ಹಣವು ಅಕ್ಟೋಬರ್ 30, 2026
ರಂದು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.
​ಪ್ರಧಾನ ಮಂತ್ರಿಯವರು ಗುಜರಾತ್‌ನ ಬನಾಸ್‌ಕಾಂತ
ದಿಂದ ಈ ಹಣವನ್ನು ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡಲಿದ್ದಾರೆ.

Sponsored

​e-KYC ಕಡ್ಡಾಯ: ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ರೈತರು e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದು
ಕಡ್ಡಾಯವಾಗಿದೆ. ಇದು ಬಾಕಿ ಇದ್ದರೆ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ.
​ಬ್ಯಾಂಕ್ ಖಾತೆ ಮತ್ತು
ಆಧಾರ್ ಜೋಡಣೆ: ನಿಮ್ಮ ಆಧಾರ್ ಕಾರ್ಡ್‌ ಸಕ್ರಿಯ ಬ್ಯಾಂಕ್ ಖಾತೆಗೆ ಹಾಗೂ NPCI ನೊಂದಿಗೆ ಲಿಂಕ್ ಆಗಿರುವುದನ್ನು
ಖಚಿತಪಡಿಸಿಕೊಳ್ಳಿ.

Advertisement

Advertisement

Advertisement
