# 3 ರೂ ಹೆಚ್ಚಳ ಬೆನ್ನಲ್ಲೇ ಮತ್ತೆ ಪೆಟ್ರೋಲ್- ಡಿಸೇಲ್ ದರ ಏರಿಕೆ?!

- Link: https://hosakannada.com/news/petrol-and-diesel-prices-hiked-again-after-rs-3-hike/
- Published: 2026-05-17T12:14:08+00:00
- Author: ಹೊಸಕನ್ನಡ ನ್ಯೂಸ್

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲ್
ಮತ್ತು ಡೀಸೆಲ್ ದರದಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಪೆಟ್ರೋಲ್-
ಡೀಸೆಲ್ ದರ ಹೆಚ್ಚಳವಾಗುವ ಆತಂಕ ಎದುರಾಗಿದೆ.

Sponsored

ಹೌದು, ಹಾರ್ಮುಜ್ ಜಲಸಂಧಿ ಮುಚ್ಚುವ ಭೀತಿ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ತೈಲ
ಆಮದು ವೆಚ್ಚ ದುಬಾರಿಯಾಗುತ್ತಿದೆ. ಹೀಗಾಗಿ ಇತ್ತೀಚೆಗಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಲೀಟರ್‌ಗೆ
ತಲಾ 3 ರೂಪಾಯಿ ಏರಿಕೆಯಾಗಿತ್ತು. ಆದರೆ, ಜಾಗತಿಕ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ
ಇಂಧನ ದರದಲ್ಲಿ ಮತ್ತೊಮ್ಮೆ 8 ರಿಂದ 10 ರೂಪಾಯಿಗಳವರೆಗೆ ಭಾರಿ ಏರಿಕೆಯಾಗಬಹುದು ಎಂದು ಆರ್ಥಿಕ ತಜ್ಞರು
ಎಚ್ಚರಿಸಿದ್ದಾರೆ.

Advertisement

Advertisement

ಈ ಸಂಭವನೀಯ ಇಂಧನ ದರ ಏರಿಕೆಯು ಸಾಗಾಣಿಕೆ ವೆಚ್ಚವನ್ನು ಹೆಚ್ಚಿಸಲಿದ್ದು, ಮಾರುಕಟ್ಟೆಯಲ್ಲಿ ನಿತ್ಯಬಳಕೆಯ
ಅಗತ್ಯ ವಸ್ತುಗಳ ಬೆಲೆ ಶೇ. 10 ರಿಂದ 20 ರಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದು ಈಗಾಗಲೇ ಕಷ್ಟದಲ್ಲಿರುವ
ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

Advertisement
