# Mangaluru: ಮಂಗಳೂರು: ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯಿಂದ ಚಿತ್ರಕಲಾ ಸ್ಪರ್ಧೆ!

- Link: https://hosakannada.com/news/painting-competition-by-the-samaraveer-kedambadi-ramaiah-gowda-memorial-establishment-committee/
- Published: 2025-04-03T17:18:59+00:00
- Author: ಕಾವ್ಯ ವಾಣಿ

Mangaluru: ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ(ರಿ.) ಮಂಗಳೂರು (Mangaluru)
ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಸಹಭಾಗಿತ್ವದಲ್ಲಿ ಮತ್ತು ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ
ಸಂಗ್ರಾಮ ತುಳುನಾಡ ಅಮರ ಸುಳ್ಯ ಸಮರ-1837 ಸಂಸ್ಮರಣಾ ಮತ್ತು ವಿಜಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

Sponsored

![](https://hosakannada.com/wp-content/uploads/2025/04/IMG-20250403-WA0033.jpg)

Advertisement

Advertisement

**ವಿಷಯ:**
 **1ರಿಂದ 4ನೇ ತರಗತಿ :-** ಸ್ವಾತಂತ್ರ್ಯ ಹೋರಾಟಗಾರ ಕದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ
ಬಳಿ ರಾಷ್ಟ್ರ ಧ್ವಜಸ್ತಂಭ ಹೀಗಿದ್ದರೆ ಚಂದ

**5ರಿಂದ 7ನೇ ತರಗತಿ :-**
 ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಉದ್ಯಾನವನ ಹೀಗಿದ್ದರೆ
ಚಂದ

**8ರಿಂದ 10ನೇ ತರಗತಿ :-**
 ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ರಸ್ತೆ ಹೀಗಿದ್ದರೆ
ಚಂದ

**ಸಾರ್ವಜನಿಕರಿಗೆ** :-
 ಶ್ರೀ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಯುದ್ಧ ಸ್ಮಾರಕ–
ಹೀಗಿದ್ದರೆ ಚಂದ

ಏಪ್ರಿಲ್ 5 2025 ರಂದು ಬಾವುಟಗುಡ್ಡ ಮಂಗಳೂರು, ಸಮಯ: ಬೆಳಗ್ಗೆ 9.00 ರಿಂದ ಆರಂಭ.

**ಬಹುಮಾನಗಳು**:
 ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಮತ್ತು ವಿಜೇತರಿಗೆ ನಗದು ಬಹುಮಾನ.

Advertisement
