# ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

- Link: https://hosakannada.com/news/news-about-murder/
- Published: 2021-08-12T12:58:26+00:00
- Author: ಹೊಸಕನ್ನಡ ನ್ಯೂಸ್

ಆಸ್ತಿ ಹಂಚಿಕೆ ವಿವಾದದಿಂದ ಸಹೋದರರ ಜೊತೆಗೂಡಿ, ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿ ಜಿಲ್ಲೆಯ
ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಇಂದು ನಡೆದಿದೆ.

Sponsored

ರಹಮಾನ್ ಈ ಹತ್ಯೆಯ ಪ್ರಮುಖ ಆರೋಪಿ. ರೇಷ್ಮಾ ರಹಮಾನ್ ತಾಸೆವಾಲೆ ಮೃತಪಟ್ಟ ಮಹಿಳೆ.

Advertisement

Advertisement

ಆಸ್ತಿಯ ಪಾಲಿನ ವಿಚಾರವಾಗಿ ಆರಂಭವಾದ ವಾದ-ವಿವಾದಗಳಿಂದ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. 
ಗಲಾಟೆ ಹೆಚ್ಚಾಗುತ್ತಾ ಕೊನೆಗೆ ಅದು ಕೊಲೆಯ ಮೂಲಕ ಅಂತ್ಯ ಕಂಡಿದೆ. ರಹಮಾನ್ ರಾಡ್‌ನಿಂದ ಹೊಡೆದು ರೇಷ್ಮಾಳನ್ನು
ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮೃತಳ ಪತಿ ರಹಮಾನ್ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ನಂದಗಡ ಪೊಲೀಸ್
ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Advertisement
