# ಐಐಟಿಯಿಂದ ಹೊಸ ಆಫ‌ರ್

- Link: https://hosakannada.com/news/new-offer-from-iit/
- Published: 2026-10-28T06:41:19+00:00
- Author: ಹೊಸಕನ್ನಡ ನ್ಯೂಸ್

ಹೊಸದಿಲ್ಲಿ: ಸ್ಟಾರ್ಟ್‌ ಅಪ್ ಅಭಿವೃದ್ಧಿಪಡಿಸಿ ಅದರಿಂದ 10 ಲಕ್ಷ ರೂ. ಗಳಿಸಿದರೆ ನಾವು ನಿಮಗೆ ಪಿಎಚ್‌
ಡಿ (ಡಾಕ್ಟರೇಟ್) ಪದವಿ ನೀಡುತ್ತೇವೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರೋಪಡ್ ಘೋಷಿಸಿದೆ.
ಮೊದಲ ಬಾರಿಗೆ ದೇಶದಲ್ಲಿ ಐಐಟಿ ರೋಪಡ್, ತನ್ನ ಸಾಂಪ್ರದಾಯಿಕ ಪಿಎಚ್‌ಡಿ ಪ್ರಬಂಧ ಬದಿಗಿಟ್ಟು ಹೊಸ 
ಪಿಎಚ್‌ಡಿ ಮಾದರಿಯನ್ನು ಪರಿಚಯಿಸಿದೆ.

Sponsored

ಈ ಬಗ್ಗೆ ಮಾಹಿತಿ ನೀಡಿದ ಐಐಟಿ ರೋಹರ್‌ ನಿರ್ದೇಶಕ ಪ್ರೊ.ರಾಜೀವ್ ಅಹುಜಾ, ಸಂಶೋಧನಾ ವಿದ್ಯಾರ್ಥಿಗಳು
ವರ್ಷಗಟ್ಟಲೆ ಪ್ರಬಂಧಗಳನ್ನು ಬರೆಯುವ ಅಗತ್ಯವಿಲ್ಲ. ಬದಲಿಗೆ ನೈಜ ಜಗತ್ತಿನ ಕೈಗಾರಿಕಾ ಸಮಸ್ಯೆಗಳಿಗೆ
ಪರಿಹಾರ ಕಂಡುಹಿಡಿಯುವುದು ಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಟಾರ್ಟ್‌ ಅಪ್ ಸ್ಥಾಪನೆ 
ಅಥವಾ ಪೇಟೆಂಟ್ ಪಡೆಯುವುದನ್ನು ತಮ್ಮ ಪಿಎಚ್‌ಡಿಯ ಮುಖ್ಯ ಗುರಿಯಾಗಿರಿಸಿಕೊಳ್ಳಬಹುದು ಎಂದರು. ಈ ವೇಳೆ
ಸಂಶೋಧನಾ ವಿದ್ಯಾರ್ಥಿಗಳು ತಯಾರಿಸಿದ ಸ್ಟಾರ್ಟ್‌ ಅಪ್‌ನಿಂದ 10 ಲಕ್ಷ ರೂ. ಗಳಿಸಿದರೆ ಅವರಿಗೆ ಪಿಎಚ್‌ಡಿ
ಪದವಿ ನೀಡಲಾಗುತ್ತದೆ ಎಂದೂ ಹೇಳಿದ್ದಾರೆ. ಈಗಾಗಲೇ ಚೀನ ಈ ಮಾದರಿಯನ್ನು ಅಳವಡಿಸಿಕೊಂಡಿದೆ ಎನ್ನಲಾಗಿದೆ.

Advertisement

Advertisement

Advertisement
