# Nejaru Case: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್‌

- Link: https://hosakannada.com/news/nejaru-case-court-issued-a-notice-for-praveen-chowgule-to-appear-before-the-court-on-march-7/
- Published: 2024-03-01T11:46:55+00:00
- Author: ಕೆ. ಎಸ್. ರೂಪಾ

Udupi: ನೇಜಾರಿನಲ್ಲಿ ನಡೆದ ಒಂದೇ ಮನೆಯ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್‌
ಚೌಗುಲೆಯನ್ನು ಮಾ.7ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು
ಸತ್ರ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

Sponsored

**ಇದನ್ನೂ ಓದಿ: [Dakshina Kannada: ಲವ್‌ ಜಿಹಾದ್‌ ಪ್ರಕರಣ; ಚೈತ್ರಾಗೆ ಬೆಂಗಳೂರಿನಲ್ಲಿ ಹುಡುಕಾಟ ತನಿಖೆ ಚುರುಕು](https://hosakannada.com/2024/03/01/dakshina-kannada-love-jihad-case-investigation-has-started-in-bengaluru-to-find-chaitra/)**

Advertisement

Advertisement

ದೋಷಾರೋಪ ವಾಚಿಸುವ ಪ್ರಕ್ರಿಯೆಗೆ ಪೂರ್ವಭಾವಿ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು 
ಪಡಿಸುವಂತೆ ನ್ಯಾಯಾಲಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದೆ ಎಂದು
ಮಾಧ್ಯಮವೊಂದು ವರದಿ ಮಾಡಿದೆ. ಆರೋಪಿಯನ್ನು ಆ ದಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಎಲ್ಲಾ ಸಾಧ್ಯತೆ
ಇದೆ ಎಂದು ವರದಿಯಾಗಿದೆ.

Advertisement
