# ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ದಿನದ ಸವಿನೆನಪಿಗಾಗಿ ಇನ್ನು ಮುಂದೆ ಆಗಸ್ಟ್ 7 “ರಾಷ್ಟ್ರೀಯ ಜಾವಲಿನ್ ದಿನ” |ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ದಿಂದ ಘೋಷಣೆ

- Link: https://hosakannada.com/news/neeraj-chopra-gold-medalist/
- Published: 2021-08-11T14:15:09+00:00
- Author: ಹೊಸಕನ್ನಡ ನ್ಯೂಸ್

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸುವ ಮೂಲಕ
ಇತಿಹಾಸ ನಿರ್ಮಿಸಿದ್ದಾರೆ ನೀರಜ್ ಚೋಪ್ರಾ. ಈ ದಾಖಲೆ ಸದಾ ನೆನಪು ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್
ಫೆಡರೇಷನ್ ಆಫ್ ಇಂಡಿಯಾ ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ ಆಚರಿಸಲು
ನಿರ್ಧರಿಸಿದೆ.

Sponsored

ಶತಕೋಟಿ ಭಾರತೀಯರ ಶತಮಾನದ ಕನಸು, ನೀರಜ್ ಚೋಪ್ರಾರವರ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನದ
ಪದಕವನ್ನು ಎತ್ತಿ ಹಿಡಿದು ದೇಶಕ್ಕೆ ಕೀರ್ತಿ ತರುವ ಮೂಲಕ ನನಸಾಗಿಸಿದ್ದಾರೆ.

Advertisement

Advertisement

ಅಥ್ಲೀಟ್​ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲಿ, ದೇಶದಾದ್ಯಂತ ಜಾವೆಲಿನ್ ಕ್ರೀಡೆಯನ್ನು ಪ್ರೋತ್ಸಾಹಿಸಲು
ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸಲಾಗುವುದು ಎಂದು ಎಎಫ್​ಐ ಪ್ಲಾನಿಂಗ್
ಕಮಿಷನ್ ಚೇರ್​​ಮನ್ ಲಲಿತ್ ಭಾನೋಟ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಅಂತರ್​ ಜಿಲ್ಲಾ ಕಾಂಪಿಟಿಷನ್​ಗಳನ್ನು ನಡೆಸಲಾಗುವುದು. ಜೊತೆಗೆ ಅಗತ್ಯವಿದ್ದಲ್ಲಿ
ಜಾವೆಲಿನ್​ಗಳನ್ನು ಪೂರೈಕೆ ಕೂಡ ಮಾಡಲಾಗುವುದು. ಇಂಥಹ ಸ್ಪರ್ಧೆಗಳನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನಾಗಿ
ಪರಿವರ್ತಿಸಲು ಚಿಂತಿಸಲಾಗಿದೆ ಎಂದಿದ್ದಾರೆ.

ಇದುವರೆಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ 23 ವರ್ಷದ ಚೋಪ್ರಾ
ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ಕೊಡುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Advertisement
