# ಚೀನದ 9-9-6 ಕೆಲಸ ನಿಯಮ ನಮಗೆ ಬೇಕು: ವಾರಕ್ಕೆ 70 ಗಂಟೆಯಿಂದ 72 ಕ್ಕೆ ಜಂಪ್ ಆದ ಇನ್ಫೋಸಿಸ್ ಮೂರ್ತಿ

- Link: https://hosakannada.com/news/narayana-murthy-chinas-9-9-6-work-rule-infosys-idol-jumps-from-70-to-72-hours-per-week/
- Published: 2025-11-19T07:43:42+00:00
- Author: ಹೊಸಕನ್ನಡ ನ್ಯೂಸ್

ಹೊಸದಿಲ್ಲಿ: ಭಾರತೀಯರು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಈ ಹಿಂದೆ ಹೇಳಿಕೆ ನೀಡಿ ವ್ಯಾಪಕ ಚರ್ಚೆಗೆ
ಮತ್ತು ಟೀಕೆಗೆ ಗುರಿಯಾಗಿದ್ದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ್ ಮೂರ್ತಿ, ಮತ್ತೊಮ್ಮೆ ತಮ್ಮ ಹೇಳಿಕೆಗೆ
ಬೆಂಬಲವಾಗಿ ಮಾತಾಡಿದ್ದಾರೆ. ಇದೀಗ ಹೇಳಿಕೆ ನೀಡಿರುವ ಅವರು, ಚೀನದ 9-9-6 ಕೆಲಸದ ಸಂಸ್ಕೃತಿಯನ್ನು
ಉಲ್ಲೇಖಿಸಿ ದ್ದಾರೆ.

Sponsored

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾರಾಯಣ ಮೂರ್ತಿ, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ
ವಾರದ 6 ಗಂಟೆ ದುಡಿವ 9-9-6 ವ್ಯವಸ್ಥೆ ಚೀನದಲ್ಲಿದೆ. ಅಲ್ಲಿನ ಈ ವ್ಯವಸ್ಥೆಯು ವಾರಕ್ಕೆ 72 ಗಂಟೆಯ
ದುಡಿಮೆಗೆ ಸಮನಾಗಿರುತ್ತದೆ. ಚೀನ ರಾಷ್ಟ್ರಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲು ಭಾರತೀಯರು ಈ ವಿಧಾನ
ಅನುಸರಿಸಲಿ ಎಂದಿದ್ದಾರೆ. ಅಂದಹಾಗೆ, ಚೀನಾ ಅಳವಡಿಸಿಕೊಂಡಿದ್ದ 9-9-6 ಕೆಲಸದ ನಿಯಮವನ್ನು 2021ರಲ್ಲಿ
ಚೀನ ಹಿಂಪಡೆದಿದೆ.

Advertisement

Advertisement

Advertisement
