# ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ

- Link: https://hosakannada.com/news/nadadoni-and-fishermen/
- Published: 2021-09-18T08:52:07+00:00
- Author: Praveen Chennavara

ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ
ಬರುತ್ತಿದ್ದ ನಾಡ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ.

Sponsored

ಚರಣ್ ಖಾರ್ವಿ ಎಂಬವರ ಮಾಲಕತ್ವದ ಜೈ ಗುರೂಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು
ದೋಣಿಯಲ್ಲಿದ್ದ ಇಬ್ಬರು ಕಣ್ಮರೆಯಾಗಿದ್ದಾರೆ.

Advertisement

Advertisement

ದೋಣಿಯಲ್ಲಿದ್ದ ಇತರೆ ಐದು ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ಬೈಂದೂರು ಪೊಲೀಸರು
ಸ್ಥಳಕ್ಕೆ ಭೇಟಿ ನೀಡಿದ್ದು,

ಮೀನುಗಾರರು, ಮುಳುಗು ತಜ್ಞರು ಕಣ್ಮರೆಯಾದವರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement
