# ಬಡ ವ್ಯಾಪಾರಿಯ ಕೊಲೆಗೆ ಕಾರಣವಾಯಿತೇ ಆ ಟ್ರ್ಯಾಕ್ಟರ್

- Link: https://hosakannada.com/news/murder-of-a-poor-merchant/
- Published: 2022-08-16T20:08:13+00:00
- Author: ಹೊಸಕನ್ನಡ ನ್ಯೂಸ್

ಜೈಪುರ: ತರಕಾರಿ ವ್ಯಾಪಾರಿಯೊಬ್ಬನನ್ನು ಟ್ರ್ಯಾಕ್ಟರ್ ಕಳ್ಳನೆಂದು ತಿಳಿದ ಗುಂಪೊಂದು ಆತನನ್ನು ಕೊಲೆ
ಮಾಡಿರುವ ಘಟನೆಯೊಂದು ನಡೆದಿದೆ.

Sponsored

ರಾಜಸ್ಥಾನದ ಜೈಪುರದ ಗೋವಿಂದಗಢ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು
ಚಿರಂಜಿ ಸೈನಿ (45) ಎಂದು ಗುರುತಿಸಲಾಗಿದೆ.

Advertisement

Advertisement

ಇಲ್ಲಿನ ರಾಂಬಾಸ್ ಎಂಬ ಗ್ರಾಮದಲ್ಲಿ ಟ್ರ್ಯಾಕ್ಟರ್ ಒಂದು ಕಳುವಾಗಿತ್ತು. ಈ ವಿಚಾರವಾಗಿ ಪೋಲಿಸ್ ಸಿಬ್ಬಂದಿಗಳು
ಮತ್ತು ಟ್ರ್ಯಾಕ್ಟರ್ ಮಾಲಿಕರು ಕಳ್ಳನನ್ನು ಹಿಡಿಯಲು ಬೆನ್ನಟ್ಟಿದರು. ಆದರೆ, ಆ ಕಳ್ಳ ಟ್ರ್ಯಾಕ್ಟರ್
ಬಿಟ್ಟು ಪರಾರಿಯಾಗಿದ್ದಾನೆ. ಅದೇ ಸಂದರ್ಭದಲ್ಲಿ ತರಕಾರಿ ವ್ಯಾಪಾರಿ ಚಿರಂಜಿ ಅದೇ ಸ್ಥಳಕ್ಕೆ ಬಂದಿದ್ದರು.
ಟ್ರ್ಯಾಕ್ಟರ್ ಮಾಲಿಕ ಚಿರಂಜಿಯನ್ನೇ ಕಳ್ಳ ಎಂದು ತಿಳಿದು, ಬಳಿಕ ತನ್ನ ಕಡೆಯವರೊಂದಿಗೆ ಸೇರಿ ಚಿರಂಜಿಯನ್ನು
ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ```wp-block-code
     ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆತ ಕಳ್ಳ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಗಂಭೀರ ಗಾಯಗೊಂಡ ಚಿರಂಜಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಚಿರಂಜಿಯವರು ಮೃತಪಟ್ಟಿದ್ದಾರೆ. 
    ```

ಘಟನೆಗೆ ಸಂಬಂಧಿಸಿದಂತೆ ಚಿರಂಜಿ ಸೈನಿ ಅವರ ಮಗ ಯೋಗೀಶ್ ಸೈನಿ ಟ್ರ್ಯಾಕ್ಟರ್ ಮಾಲಿಕನ ವಿರುದ್ಧ ಗೋವಿಂದಗಢ
ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

Advertisement
