# Mother Teresa Scholarship: ಉನ್ನತ ಶಿಕ್ಷಣ ಪಡೆಯುವವರಿಗೆ ಇಲ್ಲಿದೆ ಬೆಸ್ಟ್‌ ಸ್ಕಾಲರ್‌ ಶಿಪ್‌! ನಿಮಗಿರಬೇಕಾದ ಅರ್ಹತೆಗಳೇನು? ಇಲ್ಲಿದೆ ಕಂಪ್ಲೀಟ್‌ ವಿವರ

- Link: https://hosakannada.com/news/mother-teresa-scholarship-complete-details-in-kannada/
- Published: 2023-05-02T10:17:37+00:00
- Author: ಕಾವ್ಯ ವಾಣಿ

Mother Teresa Scholarship : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು, ಕೇರಳ 
ಸರ್ಕಾರವು [ಮದರ್ ತೆರೆಸಾ](https://en.m.wikipedia.org/wiki/Mother_Teresa) ವಿದ್ಯಾರ್ಥಿವೇತನವನ್ನು(
Mother Teresa Scholarship) ನೀಡುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ವಿದ್ಯಾರ್ಥಿ ವೇತನ 
ಸಿಗಲಿದೆ.

Sponsored

ಈ ಯೋಜನೆಡಿಯಲ್ಲಿ, ಉತ್ತಮ ಭವಿಷ್ಯಕ್ಕಾಗಿ ಪ್ಯಾರಾಮೆಡಿಕಲ್ ಅಥವಾ ನರ್ಸಿಂಗ್ ಡಿಪ್ಲೊಮಾವನ್ನು ಮುಂದುವರಿಸಲು
ಬಯಸುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

Advertisement

Advertisement

ಅಲ್ಪಸಂಖ್ಯಾತ ಸಮುದಾಯದ ಅನೇಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಪ್ಯಾರಾಮೆಡಿಕಲ್ ಅಥವಾ ನರ್ಸಿಂಗ್
ಕೋರ್ಸ್‌ಗಳಲ್ಲಿ ಮುಂದುವರಿಸಲು ಬಯಸುತ್ತಾರೆ ಆದರೆ ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದ ಈ ಕೋರ್ಸ್‌ಗಳನ್ನು
ಮುಂದುವರಿಸಲು ಅಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರವು ಮದರ್ ತೆರೇಸಾ 
ಸ್ಕಾಲರ್‌ಶಿಪ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ಜನರು ತಮ್ಮ
ಶಿಕ್ಷಣವನ್ನು ಸುಲಭವಾಗಿ ಮುಂದುವರಿಸಲು ಹಣಕಾಸಿನ ನೆರವು ನೀಡಲಾಗುವುದು. ನೀವೂ ಕೂಡಾ ಈ ಸ್ಕಾಲರ್​
ಶಿಪ್​ಗೆ ಅಪ್ಲೈ ಮಾಡಬಹುದು.

ಮುಖ್ಯವಾಗಿ ಮುಸ್ಲಿಂ, ಸಿಖ್​, ಬೌದ್ಧ ಪಾರ್ಸಿಗಳು ಮತ್ತು ಕ್ರಿಶ್ಚಿಯನ್​ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ
ವೇತನವನ್ನು ನೀಡಲಾಗುತ್ತದೆ. ಆ ವಿದ್ಯಾರ್ಥಿಗಳೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಮದರ್ ತೆರೆಸಾ ವಿದ್ಯಾರ್ಥಿವೇತನ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಸಾವಿರ ರೂಪಾಯಿ ಸಿಗುತ್ತದೆ.
ಈ ಯೋಜನೆಯ ಸಂಪೂರ್ಣ ಜವಾಬ್ಧಾರಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ
ನಿರ್ವಹಿಸುತ್ತದೆ. ಆರ್ಥಿಕ ಕಾರಣದಿಂದ ಯಾರೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಇದರ ಉದ್ದೇಶವಾಗಿದೆ.

ಈ ವಿದ್ಯಾರ್ಥಿವೇತನ ಪಡೆಯಲು, ಅರ್ಜಿದಾರರು ಕೇರಳದ ಖಾಯಂ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ
ಸೇರಿರಬೇಕು.ಉನ್ನತ ಶಿಕ್ಷಣ ಪಡೆಯುವವರಾಗಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ
8 ಲಕ್ಷಕ್ಕಿಂತ ಕಡಿಮೆ ಇರಬೇಕು. ನರ್ಸಿಂಗ್/ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ಅರ್ಜಿದಾರರಾಗಿರಬೇಕು.

ಈ ಮೇಲೆ ನೀಡಿದ ಎಲ್ಲಾ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿದ್ದರೆ ಮಾತ್ರ ಈ ಮದರ್ ತೆರೆಸಾ ವಿದ್ಯಾರ್ಥಿವೇತನವನ್ನು
ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: [ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ, ಈಕೆಯ ಮುಂದೆ ರಶ್ಮಿಕಾ ಸಂಭಾವನೆ ಕೇವಲ ಅರ್ಧ !](https://hosakannada.com/2023/05/02/aishwarya-rai-ponniyin-selvan-2-salary/)

Advertisement
