# ಬೀದಿ ಬದಿಯಲ್ಲಿ 5 ತಿಂಗಳ ಮಗುವಿಗೆ ಹಾಲುಣಿಸುವಾಗ ಹರಿದ ಕಾರು | ತಾಯಿಯ ದುರ್ಮರಣ | ಅನಾಥವಾದ ಹಸುಗೂಸು

- Link: https://hosakannada.com/news/mother-died/
- Published: 2022-02-03T12:38:55+00:00
- Author: ಹೊಸಕನ್ನಡ ನ್ಯೂಸ್

ತನ್ನ ಐದು ತಿಂಗಳ‌ ಪುಟ್ಟ ಮಗುವಿಗೆ ಬೀದಿ ಬದಿಯಲ್ಲಿ ಬಲೂನ್ ಮಾರುವ ಮಹಿಳೆ ಹಾಲುಣಿಸುತ್ತಿರುವ ಸಂದರ್ಭದಲ್ಲಿ
ವೇಗವಾಗಿ ಬಂದ ಕಾರೊಂದು ಆಕೆಯ ಮೇಲೆ ಹರಿದುಹೋದ ಪರಿಣಾಮ ಬಲೂನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದ
ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

Sponsored

ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಮಂಗಳವಾರ ರಾತ್ರಿ ಬೋರಿವ್ಲಿ ವೆಸ್ಟ್ ನ ಕೋರಾ ಸಿಗ್ನಲ್ ನಲ್ಲಿ
29 ವರ್ಷದ ಬಲೂನ್ ಮಾರಾಟಗಾರ್ತಿ ತನ್ನ ಐದು ತಿಂಗಳ ಮಗುವಿಗೆ ಹಾಲುಣಿಸುವಾಗ ಕಾರು ಆಕೆಯ ಮೇಲೆ ಹರಿದಿದೆ.
ಅಪಘಾತಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬುಧವಾರ ಮಹಿಳೆ ಮೃತಪಟ್ಟಿದ್ದಾರೆ ಎಂದು 
ವೈದ್ಯರು ಹೇಳಿದ್ದಾರೆ.

Advertisement

Advertisement

ವೆಸ್ಟ್ ಕಾಂದಿವ್ಲಿಯ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಶಿಶು ರಿವಾನ್ಶ್ ದಾಖಲಿಸಲಾಗಿದ್ದು,
ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಕಾರು ಅಪಘಾತ ಮಾಡಿಕೊಂಡ ಚಾಲಕ ಪರಾರಿಯಾಗಿದ್ದಾನೆ‌. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾರದೋ ತಪ್ಪಿಗೆ
ತನ್ನ ತಾಯಿಯನ್ನು ಕಳೆದುಕೊಂಡ 5 ತಿಂಗಳ ಮಗು ಅನಾಥವಾಗಿದೆ.

Advertisement
