# ಮಸೀದಿ ಧ್ವಂಸ ಪ್ರಕರಣ: ಐವರು ಆರೋಪಿಗಳ ಖುಲಾಸೆ

- Link: https://hosakannada.com/news/mosque-demolition-case-confession-of-five-accused/
- Published: 2026-11-06T08:49:56+00:00
- Author: ಹೊಸಕನ್ನಡ ನ್ಯೂಸ್

ಮುಜಾಫರ್‌ನಗರ (ಉತ್ತರಪ್ರದೇಶ): 2013ರಲ್ಲಿ ನಡೆದ ಮುಜಾಫರ್‌ನಗರ ಗಲಭೆ ಪ್ರಕರಣದಲ್ಲಿ ಮಸೀದಿ ಹಾಗೂ
ಮನೆಯೊಂದಕ್ಕೆ ಹಾನಿ ಮಾಡಿ ಬೆಂಕಿ ಹಚ್ಚಿದ ಆರೋಪಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯ ಪ್ರಕರಣದಲ್ಲಿ
ಐವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಖುಲಾಸೆ ಮಾಡಿದೆ.

Sponsored

ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಗುರುವಾರ ಅನೂಜ್‌,
ಅರವಿಂದ್‌, ನಿತು, ಅಂಕಿತ್‌ ಹಾಗೂ ರಾಮ್‌ಕುಮಾರ್‌ ಅವರನ್ನು ಖುಲಾಸೆ ಮಾಡಿದೆ.

Advertisement

Advertisement

ಭೋರಾಕಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮುತ್ಫರ್‌ ಗ್ರಾಮದಲ್ಲಿ 2013ರ ಸೆ.8 ರಂದು ಈ ಘಟನೆ ನಡೆದಿತ್ತು.
ಪ್ರಕರಣದ ತನಿಖೆ ಮಾಡಿದ್ದ ವಿಶೇಷ ತನಿಖಾ ತಂಡ ಐವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಆದರೆ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ
ನ್ಯಾಯಾಲಯ ಈ ತೀರ್ಪು ನೀಡಿದೆ.

Advertisement
