# ಮೂಡುಬಿದಿರೆ: ಕಾರು-ಸ್ಕೂಟರ್‌ ಡಿಕ್ಕಿ: ತಂದೆ ಮಗ ಗಾಯ

- Link: https://hosakannada.com/news/moodbidri-car-scooter-collision-father-and-son-injured/
- Published: 2026-10-18T13:29:10+00:00
- Author: ಹೊಸಕನ್ನಡ ನ್ಯೂಸ್

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿ ಕಾರು ಮತ್ತು ಸ್ಕೂಟರ್‌ ನಡುವೆ ಡಿಕ್ಕಿ ಸಂಭವಿಸಿ
ತಂದೆ ಮಗ ಗಾಯಗೊಂಡ ಘಟನೆ ಅ.16 ರಂದು ಬೆಳಗ್ಗೆ ನಡೆದಿದೆ.

Sponsored

ಅಬ್ದುಲ್‌ ರಹಿಮಾನ್‌ ಅವರು ತಂದೆ ಹುಸೈನ್‌ ಅವರನ್ನು ಸಹಸವಾರರನ್ನಾಗಿ ಕೂರಿಸಿ ಸ್ಕೂಟರ್‌ನಲ್ಲಿ ತೋಡಾರ್‌ನಿಂದ
ಮೂಡುಬಿದಿರೆ ಕಡೆಗೆ ತೆರಳುತ್ತಿದ್ದು, ಹಂಡೇಲು ಎಂಬಲ್ಲಿ ತಿರುವಿನ ಬಳಿ ಮೂಡುಬಿದಿರೆಯಿಂದ ತೋಡಾರು
ಕಡೆಗೆ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Advertisement

Advertisement

ಡಿಕ್ಕಿಯ ರಭಸಕ್ಕೆ ತಂದೆ-ಮಗ ರಸ್ತೆಗೆ ಬಿದ್ದಿದ್ದು ಗಾಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ 
ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement
