# Moodabidre: ಗುಡ್ಡದಲ್ಲಿ ಕಟ್ಟಿಹಾಕಿದ 12 ಹೋರಿ ಸೇರಿದಂತೆ‌ 14 ಜಾನುವಾರುಗಳನ್ನು ವಶಪಡಿಸಿಕೊಂಡ ಪೊಲೀಸರು

- Link: https://hosakannada.com/news/moodabidre-14-animals-recovered-by-police/
- Published: 2024-05-18T20:18:15+00:00
- Author: Praveen Chennavara

Moodabidre: ಗುಡ್ಡದಲ್ಲಿ ಅಕ್ರಮವಾಗಿ 14 ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯವ ಉದ್ದೇಶದಿಂದ
ಕಟ್ಟಿ ಹಾಕಲಾಗಿದೆ ಎಂಬ ಸಾರ್ವಜನಿಕರ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ಜಾನುವಾರುಗಳನ್ನು
ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಶನಿವಾರ ನಡೆದಿದೆ.

Sponsored

ಮೂಡುಬಿದಿರೆ ತೋಡಾರಿನ ಹಿದಾಯತ್ ನಗರದ ಪೆರಾಡಿ ಕಂಪೌಂಡ್ ನ ಅಬುಸಾಲಿ ಎಂಬವರ ಮನೆಯ ಜಾಗದಲ್ಲಿ ಹಂಡೇಲಿನ
ಹಸನ್ ಬಾವಾ ಎಂಬವರು 12 ಹೋರಿ ಮತ್ತು 2 ಕೋಣಗಳನ್ನು ಅಕ್ರಮವಾಗಿ ಕಟ್ಟಿ ಹಾಕಿದ್ದರು.

Advertisement

Advertisement

ಈ ಕುರಿತು ಮಾಹಿತಿಯನ್ನು ಪಡೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು
ಸಿಬಂದಿಗಳು ದಾಳಿ ನಡೆಸಿದ್ದರು.
 ಆರೋಪಿಗಳಾದ ಹಸನ್ ಬಾವಾ ಮತ್ತು ಅಬುಸಾಲಿ ತಪ್ಪಿಸಿಕೊಂಡಿದ್ದು, 
ರಕ್ಷಿಸಿದ ಜಾನುವಾರುಗಳನ್ನು ಕೆಂಜಾರಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Advertisement
