# Viral Video: ಖಮೇನಿಗೆ ಮೋದಿ ದ್ರೋಹ ಮಾಡಿದ್ರು , ಸೋ.. ಭಾರತಕ್ಕೆ ಇರಾನ್ ಹನಿ ನೀರನ್ನೂ ಕೊಡಬಾರ್ದು – ಭಾರತದ ಮುಸ್ಲಿಂ ಮಹಿಳೆ ಹೇಳಿಕೆ

- Link: https://hosakannada.com/news/modi-betrayed-khamenei-so-iran-should-not-give-even-a-drop-of-water-to-india-indian-muslim-womans-statement/
- Published: 2026-03-18T10:40:07+00:00
- Author: ಹೊಸಕನ್ನಡ ನ್ಯೂಸ್

Viral Video : ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಮಾಡಿ ಅಲ್ಲಿನ ಸರ್ವೋಚ್ಛ
ನಾಯಕ ಖಮೇನಿ ಅವರನ್ನು ಹತ್ಯೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಖಮೇನಿ ಹತ್ಯೆಯನ್ನು ಖಂಡಿಸಿ ಭಾರತದಲ್ಲಿ
ಹಲವೆಡೆ ಪ್ರತಿಭಟನೆಗಳು ಕೂಡ ನಡೆದಿದೆ. ಹೀಗೆ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ
ಒಬ್ಬರು ಮೋದಿ ಹಾಗೂ ಭಾರತದ ವಿರುದ್ಧ ಹೇಳಿಕೆ ನೀಡಿರುವುದು ಒಂದು ವೈರಲ್ ಆಗಿದೆ.

Sponsored

ಯಸ್, ಮೋದಿಜೀ ಖಮೇನಿಗೆ ದ್ರೋಹ ಮಾಡಿದ್ರು ಹೀಗಾಗಿ ಭಾರತಕ್ಕೆ ಇರಾನ್ ಹನಿ ನೀರೂ ಕೂಡಾ ಕೊಡಬಾರದು 
ಎಂದು ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆ ಹೇಳಿರುವ ವಿಡಿಯೋ ವೈರಲ್ ಆಗಿದೆ. 

Advertisement

Advertisement

ಇರಾನ್ ನವರು ಭಾರತಕ್ಕೆ ಹನಿ ನೀರೂ ಕೊಡಬಾರದು. ಖಮೇನಿ ಹತ್ಯೆಗೆ ಭಾರತ, ಮೋದಿಜೀ ಕೂಡಾ ಕಾರಣ. ಖಮೇನಿ
ಹತ್ಯೆ ಮಾಡುವ ಕೆಲವು ದಿನಗಳ ಮೊದಲೇ ಮೋದಿ ಎಲ್ಲಿಗೆ ಹೋಗಿದ್ದರು? ಇಸ್ರೇಲಿಗೆ ಹೋಗಿ ಅಲ್ಲಿನ ನಾಯಕರನ್ನು
ಭೇಟಿ ಮಾಡಿ ಬಂದಿದ್ದರು. ಹೀಗಾಗಿ ಖಮೇನಿ ಹತ್ಯೆಗೆ ಮೋದಿ ಜೀ ಕೂಡಾ ಕಾರಣ’ ಎಂದಿದ್ದಾರೆ. ಮಹಿಳೆಯ 
ಹೇಳಿಕೆಗೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement
