# ಮೇದಿನಡ್ಕ ಅಂಗನವಾಡಿ ಕೇಂದ್ರದ ಆವರಣ ಕಾಂಪೌಂಡ್ ರಚನೆಗೆ ಗುದ್ದಲಿ ಪೂಜೆ

- Link: https://hosakannada.com/news/medinadka-anganvady-compound/
- Published: 2021-10-07T14:10:42+00:00
- Author: Praveen Chennavara

ಅಜ್ಜಾವರ, ಮೇದಿನಡ್ಕ ಅಂಗನವಾಡಿ ಕೇಂದ್ರದ ನೂತನ ಕಾಂಪೌಂಡ್ ರಚನೆಗೆ ಜಿಲ್ಲಾ ಪಂಚಾಯತ್ ನಿಂದ 2.50
ಲಕ್ಷ ಅನುದಾನ ಬಿಡುಗಡೆಗೊಂಡಿದ್ದು,ಈ ಯೋಜನೆಯ ಗುದ್ದಲಿ ಪೂಜೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ
ಶ್ರೀಮತಿಸತ್ಯವತಿ ಬಸವನಪಾದೆ ನೆರವೇರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ 
ರವಿರಾಜ್ ಕರ್ಲಪಾಡಿ, ಶ್ರೀಮತಿ ದಿವ್ಯ ಪಡ್ಡಂಬೈಲು, ಕಾಮಗಾರಿ ಗುತ್ತಿಗೆದಾರರಾದ ಶ್ರೀ ಸುಬೋದ್ ಶೆಟ್ಟಿ
ಮೇನಾಲ ,ಸ್ಥಳೀಯರಾದ , ದಯಾಳ್ ಮೇದಿನಡ್ಕ, ರಮೇಶ್ ಮೇದಿನಡ್ಕ, ಕಂದಯ್ಯ, ಅಜೀತ್, ಮುತ್ತುಕುಮಾರ , 
ಪ್ರಜ್ವಲ್ ಅಂಗನವಾಡಿ ಸಹಾಯಕಿ ಶ್ರೀಮತಿ ಕವಿತಾ ಮೇದಿನಡ್ಕ, ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ಸುಬೋಧ್ ಶೆಟ್ಟಿ ಮೇನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಮುತ್ತು ಮಾರಿಯಮ್ಮ
ದೇವಸ್ಥಾನದ ಸಹ ಅರ್ಚಕ ರಾಘವ ಪೂಜಾ ಕೈಂಕರ್ಯ ನೆರವೇರಿಸಿದರು .

Sponsored

![](https://hosakannada.com/wp-content/uploads/2021/10/IMG-20211007-WA0010-1024x576.
jpg)

ಅಂಗನವಾಡಿ ಕಾರ್ಯಕರ್ತೆ ಶಿವಪಾಕ್ಯಂ ಮೇದಿನಡ್ಕ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

Advertisement

Advertisement

Advertisement
