# ಮೇ ಅಂತ್ಯದವರೆಗೆ ವಿಸ್ತರಣೆಯಾಗಲಿದೆಯೇ ಶಾಲಾ ಮಕ್ಕಳ ಬೇಸಿಗೆ ರಜಾ!!? ಹೆಚ್ಚಿದ ತಾಪಮಾನದಿಂದ ಶಾಲಾ ಪ್ರಾರಂಭ ದಿನ ವಿಸ್ತರಿಸಲು ಮನವಿ

- Link: https://hosakannada.com/news/may-end-and-summer-holidayextend/
- Published: 2022-05-03T17:57:05+00:00
- Author: ಹೊಸಕನ್ನಡ ನ್ಯೂಸ್

ವಾತಾರವರಣದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಈಗಾಗಲೇ ಶಾಲಾ ಕಾಲೇಜುಗಳ ಆರಂಭಕ್ಕೆ ಮೇ 14ರಂದು
ದಿನ ನಿಗದಿ ಮಾಡಲಾಗಿರುವುದನ್ನು ವಿಸ್ತರಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸರ್ಕಾರಕ್ಕೆ
ಮನವಿ ಸಲ್ಲಿಸಿದ್ದಾರೆ.

Sponsored

![](https://hosakannada.com/wp-content/uploads/2022/05/IMG-20220503-WA0019.jpg)

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು,
ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸಹಿತ ದಾವಣಗೆರೆ ಜಿಲ್ಲೆಯ
ವಾತಾರವರಣದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿರುವ ಬಿಸಿಲ ಧಗೆಯಿಂದ ಪೋಷಕರು ಮಕ್ಕಳನ್ನು ಶಾಲೆಗೆ
ಕಳುಹಿಸಲು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Advertisement

ಈ ಹಿನ್ನೆಲೆಯಲ್ಲಿ ಮೇ 14 ರಿಂದ ಶಾಲೆಗಳನ್ನು ತೆರೆಯಲು ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸಿ,
ಮೇ ಅಂತ್ಯದವರೆಗೆ ರಜೆ ಮುಂದುವರಿಸಲು ಮನವಿ ಸಲ್ಲಿಸಲಾಗಿದೆ. ಸದ್ಯ ಈ ವಿಚಾರ ಮಾನ್ಯ ಮುಖ್ಯಮಂತ್ರಿ
ಬೊಮ್ಮಾಯಿ ಗಮನಕ್ಕೂ ಬಂದಿದ್ದು,ರಜೆ ವಿಸ್ತರಣೆಯ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು
ಕಾದುನೋಡಬೇಕಾಗಿದೆ.

Advertisement
