# ಮಸೀದಿಗಳಿಗೆ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯ | ಇಂದಿನಿಂದ ದೇಗುಲಗಳಲ್ಲಿ ಹನುಮಾನ್ ಚಾಲೀಸ್, ಭಜನೆ

- Link: https://hosakannada.com/news/masjid-azaan-and-temple-suprabhata/
- Published: 2022-05-09T08:00:35+00:00
- Author: Praveen Chennavara

ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯವಾಗಿದ್ದು, ಸೋಮವಾರದಿಂದ ಮಸೀದಿಗಳ ಸಮೀಪದ
ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಮತ್ತು ಭಜನೆಗಳನ್ನು ಲೌಡ್ ಸ್ಪೀಕರ್ ಗಳಲ್ಲಿ ಮೊಳಗಿಸುವುದಾಗಿ ಶ್ರೀರಾಮಸೇನೆ
ಹೇಳಿದೆ.

Sponsored

ಈ ಕುರಿತು ಮಾಹಿತಿ ನೀಡಿರುವ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ
ನಗರದ ಸೂಪರ್ ಮಾರ್ಕೆಟ್ ಆಟೊ ನಿಲ್ದಾಣದ ಬಳಿಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು. 
ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಭಜನೆ, ಹನುಮಾನ ಚಾಲಿಸಾ ಪಠಿಸಲಾಗುವುದು ಎಂದು ಹೇಳಿದ್ದಾರೆ.

Advertisement

Advertisement

ಸೋಮವಾರದಿಂದ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸದ ಜೊತೆಗೆ ವೇದಮಂತ್ರಗಳನ್ನು ಮೊಳಗಿಸಲು
ಶ್ರೀರಾಮಸೇನೆ ಮತ್ತು ಇತರ ಹಿಂದುತ್ವಪರ ಸಂಘಟನೆಗಳು ಮುಂದಾಗಿವೆ.

Advertisement
