# ಮರೋಡಿ ಪೊಸರಡ್ಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ: ಉಮಾಮಹೇಶ್ವರ ದೇವಸ್ಥಾನದಿಂದ ಪೊಸರಡ್ಕ ಕ್ಷೇತ್ರಕ್ಕೆ ಭವ್ಯ ಶೋಭಾಯಾತ್ರೆ

- Link: https://hosakannada.com/news/marodi-posaradka-brahmakumbhabhishekha/
- Published: 2026-04-28T18:59:02+00:00
- Author: ಹೊಸಕನ್ನಡ ನ್ಯೂಸ್

ಮರೋಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಪೊಸರಡ್ಕ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ 
ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ಎ. 28ರಿಂದ ಮೇ 1ರವರೆಗೆ ನಡೆಯಲಿರುವ ಪುನರ್
ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕದ ಹಿನ್ನೆಲೆಯಲ್ಲಿ ಏ.28 ರಂದು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ
ಪೊಸರಡ್ಕ ಕ್ಷೇತ್ರಕ್ಕೆ ಭವ್ಯ ಶೋಭಾಯಾತ್ರೆ ಮೂಲಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Sponsored

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು
ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು.

Advertisement

Advertisement

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಗೌರವಾಧ್ಯಕ್ಷ ರಾಜೇಂದ್ರ ಬಲ್ಲಾಲ್, ಆಡಳಿತ
ಸಮಿತಿ ಅಧ್ಯಕ್ಷ ಜಯರಾಮ್ ಬುಣ್ಣು, ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ.ಕೆ, ಬ್ರಹ್ಮಕುಂಭಾಭಿಷೇಕ ಸಮಿತಿ
ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ, ನಾರಾಯಣ ಪೂಜಾರಿ ಉಳ್ಳೂರು, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್
ಜೈನ್, ಸತೀಶ್ ಕೆ. ಕಾಶಿಪಟ್ಟ, ಜಯಂತ್ ಕೋಟ್ಯಾನ್, ಸುದರ್ಶನ ಜೈನ್ ಪಾಡಿಬೆಟ್ಟುಗುತ್ತು ಮತ್ತಿತರರು
ಇದ್ದರು.ವಿವಿಧ ಕಡೆಗಳಿಂದ ಆಗಮಿಸಿದ ಹೊರೆಕಾಣಿಕೆ ಹೊತ್ತೊಯ್ದ ವಾಹನಗಳು ಮರೋಡಿ ದೇವಸ್ಥಾನದಿಂದ ಹೊರಟು
ಸಾವಿರಾರು ಭಕ್ತರ ಸಮ್ಮುಖದಲ್ಲಿ ಚೆಂಡೆ, ಕುಣಿತ ಭಜನೆ, ಬ್ಯಾಂಡ್ ವಾದಕಗಳ ಮೂಲಕ ಶ್ರೀ ಕ್ಷೇತ್ರಕ್ಕೆ
ಸಾಗಿಬಂತು.

Advertisement
