# ಮಂಗಳೂರು: ದೋಣಿ ದುರಂತ ,ಓರ್ವ ಕಣ್ಮರೆ,ನಾಲ್ವರ ರಕ್ಷಣೆ

- Link: https://hosakannada.com/news/manglore-beach-and-fishermen/
- Published: 2021-09-11T09:45:08+00:00
- Author: Praveen Chennavara

ಮಂಗಳೂರಿನ ಕಡಲಿನಲ್ಲಿ ಇಂದು ಬೆಳಗ್ಗೆ ದೋಣಿ ಅವಗಢ ಸಂಭವಿಸಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದಾರೆ
ಎಂದು ವರದಿಯಾಗಿದೆ.

Sponsored

ಪಣಂಬೂರು ಬೀಚ್ ಸಮೀಪವೇ ಈ ಅವಗಢ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ಮೀನು ಹಿಡಿಯುವ ವೇಳೆ ಬೀಸಿದ
ಗಾಳಿಗೆ ಗಿಲ್‌ನೆಟ್ ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

Advertisement

Advertisement

ಅಝರ್ ಎಂಬವರ ಮಾಲೀಕತ್ವದ ಈ ದೋಣಿಯಲ್ಲಿ ಬೆಂಗ್ರೆಯ ಅಬ್ದುಲ್ ಅಜೀಜ್, ಇಮ್ಮಿಯಾಜ್, ಸಿನಾನ್, ಫೈರೋಜ್
ಹಾಗೂ ಶರೀಫ್ ಎಂಬವರಿದ್ದರು. ಇವರಲ್ಲಿ ಶರೀಫ್ ನೀರುಪಾಲಾಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ.
ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ ಎಂದು ತಿಳಿದುಬಂದಿದೆ.

Advertisement
