# ಮಂಗಳೂರು: ರಹಿಮಾನ್‌ ಹತ್ಯೆ ಪ್ರಕರಣ, ಮುಖ್ಯಮಂತ್ರಿ ಕಾರಿಗೆ ಕಪ್ಪುಬಾವುಟ ಪ್ರದರ್ಶನ ಯತ್ನ

- Link: https://hosakannada.com/news/mangaluru-rahman-murder-case-attempt-to-show-black-flag-to-chief-ministers-car/
- Published: 2026-09-18T10:52:39+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭೇಟಿ ಸಂದರ್ಭದಲ್ಲಿ ಮಂಗಳೂರಿನಲ್ಲಿ
ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ನಾಯಕರು ಬಾವುಟ ಪ್ರದರ್ಶಿಸಲು ಯತ್ನ ಮಾಡಿದ ಘಟನೆ
ನಡೆದಿದೆ.

Sponsored

ಬಂಟ್ವಾಳದ ರಹಿಮಾನ್‌ ಕೊಳ್ತಮಜಲ್‌ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹ ಮಾಡಿ ಎಸ್‌ಡಿಪಿಐ 
ಕಾರ್ಯಕರ್ತರು ಈ ಪ್ರತಿಭಟನೆಗೆ ಮುಂದಾಗಿದ್ದರು.

Advertisement

Advertisement

ಹಂಪನಕಟ್ಟೆಯಲ್ಲಿ ಎಸ್‌ಡಿಪಿಐ ನಾಯಕರು ಮತ್ತು ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದು,
ಪರಿಸ್ಥಿತಿಯ ಸೂಕ್ಷ್ಮತೆಯನ್ನು ಪರಿತ ಮಂಗಳೂರು ನಗರ ಪೊಲೀಸರು ಕೂಡಲೇ ಕಪ್ಪು ಬಾವುಟ ಪ್ರದರ್ಶನಕ್ಕೆ
ಯತ್ನ ಮಾಡಿದ ಪ್ರತಿಭಟನಕಾರರನ್ನು ಕಸ್ಟಡಿಗೆ ಪಡೆದರು.

ಬಂಟ್ವಾಳದಲ್ಲಿ ನಡೆದಿದ್ದ ಸುಹಾಸ್‌ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ನಡೆದಿದ್ದ ರಹಿಮಾನ್ ಕೊಳ್ತಮಜಲ್‌
ಅವರನ್ನು ಹತ್ಯೆ‌ ಮಾಡಲಾಗಿತ್ತು ಎನ್ನುವ ಆರೋಪವಿದೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ನ್ಯಾಯಾಲಯದಿಂದ
ಜಾಮೀನು ದೊರೆತಿರುವುದು ಸರಕಾರದ ಕಾನೂನು ಮತ್ತು ತನಿಖಾ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಎಸ್‌ಡಿಪಿಐ
ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

Advertisement
