# ಮಂಗಳೂರು: ಜ.1 ರಿಂದ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ

- Link: https://hosakannada.com/news/mangaluru-installation-of-electricity-smart-meters-mandatory-from-january-1/
- Published: 2025-12-13T08:28:38+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಆದೇಶದ ಪ್ರಕಾರ ಜನವರಿ 1 ರಿಂದ ಸ್ಮಾರ್ಟ್‌ ಮೀಟರ್‌
ಕಡ್ಡಾಯ ಮಾಡಲಾಗಿದೆ.

Sponsored

ಆಯೋಗದ ಆದೇಶದ ಅನುಸಾರ ಹೊಸದಾಗಿ ವಿದ್ಯುತ್‌ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ 
ಆಗಿರುವುದರಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ 2026 ರ ಜನವರಿ 1 ರಿಂದ ಹೊಸ ಸಂಪರ್ಕಗಳಿಗೆ ಸ್ಮಾರ್ಟ್‌
ಮೀಟರ್‌ಗಳನ್ನು ಕಡ್ಡಾಯ ಮಾಡಲಾಗಿದೆ.

Advertisement

Advertisement

ಇದಕ್ಕೆ ಪ್ರತ್ಯೇಕವಾಗಿ ಹೆಚ್ಚು ಸ್ಥಳಾವಕಾಶ ಕಲ್ಪಿಸುವ ಅಗತ್ಯವಿಲ್ಲ. ಮತ್ತು ಈಗಾಗಲೇ ಸಂಪರ್ಕ ಪಡೆದುಕೊಂಡ
ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

Advertisement
