# ಮಂಗಳೂರು: ದಾರಿಯಲ್ಲಿ ಸಿಕ್ಕ ಹಣದ ಚೀಲ ಪೊಲೀಸರಿಗೆ ನೀಡಿದ ವ್ಯಕ್ತಿ

- Link: https://hosakannada.com/news/mangalore-the-person-who-found-a-bag-of-money-on-the-road-handed-it-over-to-the-police/
- Published: 2026-08-24T19:32:11+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಆ.21 ರಂದು ಮಾಂಡೋವಿ ಮೋಟಾರ್ಸ್‌ನ ಉಪ್ಪಿನಂಗಡಿ ಶಾಖೆಯ ಉದ್ಯೋಗಿಗಳು ಬ್ಯಾಂಕ್‌ಗೆ ಜಮಾ
ಮಾಡಲು ಕೊಂಡೊಯ್ಯುತ್ತಿದ್ದ ಹಣದ ಚೀಲ ದಾರಿಯಲ್ಲಿ ಕಳೆದುಹೋಗಿತ್ತು. ರಸ್ತೆಯಲ್ಲಿ ಅಡ್ಯಾರ್‌ನ ಗ್ರಾನೈಟ್‌
ವರ್ಲ್ಡ್‌ ಮಾಲೀಕ ಯಾಕೂಬ್‌ ಅವರಿಗೆ ಈ ಚೀಲ ದೊರೆತಿದ್ದು, ಕೂಡಲೇ ಅವರು ಮಂಗಳೂರು ಉಪ ಪೊಲೀಸ್‌ ಆಯುಕ್ತರ
ಕಚೇರಿಗೆ ತಲುಪಿಸಿ ಮಾದರಿಯಾಗಿದ್ದಾರೆ.

Sponsored

ನಂತರ ಮಾಂಡೋವಿ ಮೋಟಾರ್ಸ್‌ ಸಂಸ್ಥೆಯ ಡಿಜಿಎಂ ಅಶೋಕ್‌ ಕುಮಾರ್‌ ಹಾಗೂ ಹಿರಿಯ ವ್ಯವಸ್ಥಾಪಕ ಶಿವಪ್ರಸಾದ್‌
ಅವರು ಪೊಲೀಸ್‌ ಕಚೇರಿಯಲ್ಲಿ ಹಣ ಪಡೆದುಕೊಂಡರು. ಹಣವನ್ನು ಸುರಕ್ಷಿತವಾಗಿ ಹಿಂತಿರುಗಿಸಿದ ಯಾಕೂಬ್‌
ಅವರ ಪ್ರಾಮಾಣಿಕತೆಗೆ ಮಾಂಡೋವಿ ಮೋಟಾರ್ಸ್‌ ಕೃತಜ್ಞತೆ ಸಲ್ಲಿಸಿದೆ.

Advertisement

Advertisement

Advertisement
