# ಮಂಗಳೂರು ಕಂಬಳ: 8.69 ಸೆಕೆಂಡಿನಲ್ಲಿ 100 ಮೀಟರ್‌ ಓಡಿದ ಕಂಬಳ ಓಟಗಾರ

- Link: https://hosakannada.com/news/mangalore-kambala-kambala-runner-runs-100-meters-in-8-69-seconds/
- Published: 2025-12-29T08:42:15+00:00
- Author: Mallika

ಮಂಗಳೂರು: ಕಂಬಳದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್‌ ಓಟವನ್ನು 8.76 ಸೆಕೆಂಡಿನಲ್ಲಿ
ಪೂರೈಸಿದ್ದಾರೆ. ಕಂಬಳ ಓಟದಲ್ಲಿ ಶ್ರೀನಿವಾಸ ಗೌಡರ ದಾಖಲೆಯಲ್ಲಿ ಮೀರಿಸಿದ ಹೊಸ ದಾಖಲೆ ಮಂಗಳೂರಿನಲ್ಲಿ
ನಡೆದಿದೆ.

Sponsored

![](https://hosakannada.com/wp-content/uploads/2025/12/IMG_20251229_084116.jpg)

ಮಂಗಳೂರಿನ ಕೂಳೂರಿನಲ್ಲಿ ನಡೆದ ರಾಮ ಲಕ್ಷ್ಮಣ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ
80 ಬಡಗಬೆಟ್ಟು ಶ್ರೀಕ ಸಂದೀಪ್‌ ಶೆಟ್ಟಿ ಅವರ ಕೋಣಗಳು 125 ಮೀಟರ್‌ ಉದ್ದದ ಕೆರೆಯನ್ನು 10.87 ಸೆಕೆಂಡುಗಳಲ್ಲಿ
ಕ್ರಮಿಸಿ ನೂತನ ದಾಖಲೆ ಮಾಡಿದೆ. ಈ ಕೋಣಗಳನ್ನು ಕುಂದ ಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್‌ ಕುಮಾರ್‌
ಓಡಿಸಿದ್ದು ಹೊಸ ದಾಖಲೆ ಮಾಡಿದ್ದಾರೆ. ನೂರು ಮೀಟರ್‌ ಓಟವನ್ನು ಕೇವಲ 8.69 ಸೆಕೆಂಡಿನಲ್ಲಿ ಓಡಿ ಶ್ರೀನಿವಾಸ
ಗೌಡರು ಸಾಧನೆ ಮಾಡಿದ್ದಾರೆ. ಇದೊಂದು ಹೊಸ ಹೊಸ ಇತಿಹಾಸ ಎನ್ನಬಹುದು.

Advertisement

Advertisement

**ಮಂಗಳೂರು ಕಂಬಳ ಫಲಿತಾಂಶಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 141 ಜತೆ
ಅಡ್ಡ ಹಲಗೆ – ಪ್ರಥಮ:
ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ “ಎ” (11.68) ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್
ದೇವಾಡಿಗದ್ವಿತೀಯ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಳಾರು (11.83) ಹಲಗೆ ಮುಟ್ಟಿದವರು-
ಬೈಂದೂರು ಮಹೇಶ್ ಪೂಜಾರಿ

ಹಗ್ಗ ಹಿರಿಯ – ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.41)
ಓಡಿಸಿದವರು: ಕಕ್ಕೆಪದವು
ಪೆಂರ್ಗಾಲು ಕೃತಿಕ್ ಗೌಡದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ಪ್ರಾಣೇಶ್ ದಿನೇಶ್ ಭಂಡಾರಿ“
ಎ” (11.50) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ಹಗ್ಗ ಕಿರಿಯ- ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ “ಬಿ” (
11.41) ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
ದ್ವಿತೀಯ: ಎರ್ಮಾಳ್‌ ಡಾ.ಚಿಂತನ್ ರೋಹಿತ್ ಹೆಗ್ಡೆ(
11.62), ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ

ನೇಗಿಲು ಹಿರಿಯ – ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.87)
ಓಡಿಸಿದವರು:
ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ“
ಎ” (11.44)ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ನೇಗಿಲು ಕಿರಿಯ ಪ್ರಥಮ: ಎರ್ಮಾಳ್ ಪುಸ್ಕೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ “ಬಿ” (11.56)ಓಡಿಸಿದವರು:
ಕಾವೂರುದೋಟ ಸುದರ್ಶನ್
ದ್ವಿತೀಯ: ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (11.74),
ಓಡಿಸಿದವರು: ಬಾರಾಡಿ ನತೀಶ್ ಸಫಲಿ

Advertisement
