# ಮಂಗಳೂರು ನಗರದಲ್ಲಿ ನಡೆಯಿತು ಮತ್ತೊಂದು ಅಮಾನವೀಯ ಘಟನೆ | ನಾಯಿಯೊಂದನ್ನು ಗೋಣಿ ಚೀಲದಲ್ಲಿ ತುಂಬಿ ಬೀದಿಗೆ ಎಸೆದ ದುಷ್ಕರ್ಮಿಗಳು

- Link: https://hosakannada.com/news/mangalore-and-dog-story/
- Published: 2021-09-07T09:21:33+00:00
- Author: ಹೊಸಕನ್ನಡ

ಮಂಗಳೂರು ನಗರದಲ್ಲಿ ಯಾರೋ ದುಷ್ಕರ್ಮಿಗಳು ನಾಯಿಯೊಂದನ್ನು ಗೋಣಿ ಚೀಲದಲ್ಲಿ ತುಂಬಿಸಿ ಬೀದಿಯಲ್ಲಿ 
ಬಿಸಾಕಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

Sponsored

ಮಂಗಳೂರು ನಗರದ ಹೊರವಲಯದ ಕುಡುಪು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇನ್ನು ನಾಯಿಯನ್ನು ಗಮನಿಸಿದ ವಾಮಂಜೂರು
ನಿವಾಸಿ ಗ್ಲಾಟ್ಸನ್, ನಾಗೇಶ್ ಶೆಣೈ ಅವರು ತಕ್ಷಣ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಅಮಾನವೀಯ ಕೃತ್ಯದ
ವಿರುದ್ಧ ನಿಂತ ಇಬ್ಬರು ಯುವಕರು ನಾಯಿಯನ್ನು ರಕ್ಷಿಸಿದ್ದಾರೆ.

Advertisement

Advertisement

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ದುಷ್ಕರ್ಮಿಗಳ ಕೃತ್ಯದ ವಿರುದ್ಧ ತೀವ್ರ
ಆಕ್ಷೇಪ ವ್ಯಕ್ತವಾಗಿದೆ.

ಈ ರೀತಿಯ ಕೃತ್ಯಗಳು ನಗರದಲ್ಲಿ ಮತ್ತೆ ಮತ್ತೆ ನಡೆಯುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು
ಹಲವರು ಒತ್ತಾಯಿಸಿದ್ದಾರೆ.

Advertisement
