# ಬುದ್ಧಿಮಾಂದ್ಯನ ಮೇಲೆ ಮನಬಂದಂತೆ ನಡುರಸ್ತೆಯಲ್ಲೇ ಥಳಿಸಿದ ಪಿಎಸ್ ಐ ಮತ್ತು ಪೇದೆ!

- Link: https://hosakannada.com/news/man-hitted-by-police/
- Published: 2022-03-05T11:34:13+00:00
- Author: ಹೊಸಕನ್ನಡ ನ್ಯೂಸ್

ಬುದ್ಧಿಮಾಂದ್ಯ ವ್ಯಕ್ತಿಯೊಬ್ಬರ ಮೇಲೆ ಮನಬಂದಂತೆ ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ಅವರು ಸೇರಿ‌ಥಳಿಸಿರುವಂತಹ
ಘಟನೆಯೊಂದು ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಡೆದಿದೆ.

Sponsored

ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯ ಪಿಎಸ್ ಐ ರಾಜೇಂದ್ರ ನಾಯ್ಕ್ ಹಾಗೂ ಕಾನ್ಸ್ ಟೇಬಲ್ ಸೇರಿಕೊಂಡು
ಬುದ್ಧಿಮಾಂದ್ಯನಾಗಿದ್ದಂತ ಜಟ್ಟಪ್ಪ ಎಂಬಾತನ ಮೇಲೆ ಮನಬಂದಂತೆ ಥಳಿಸಿದ್ದಾರೆ.

Advertisement

Advertisement

![](https://hosakannada.com/wp-content/uploads/2022/03/IMG_20220305_113140.jpg)

ನಡುರಸ್ತೆಯಲ್ಲಿಯೇ ಅಮಾನವೀಯವಾಗಿ ಪೊಲೀಸರು ಈ ರೀತಿ ಮಾಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಜಟ್ಟಪ್ಪ ರಸ್ತೆಯಲ್ಲಿ ಓಡಾಡುತ್ತಿದ್ದಂತವರ ಮೇಲೆ ಕಲ್ಲು ಎಸೆದು,
ಹಲ್ಲೆ ನಡೆಸುತ್ತಿದ್ದನಂತೆ. ಇದರಿಂದ ರೋಸಿ ಹೋದಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ
ದೂರು ಆಧರಿಸಿ ಬಂದ ಪೊಲೀಸರು ಆತನನ್ನು ಬಂಧಿಸಿ ಕ್ರಮಕೈಗೊಳ್ಳೋ ಬದಲು ಈ ರೀತಿಯಾಗಿ ಅಮಾನವೀಯವಾಗಿ 
ವರ್ತನೆ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡಾ ಆಗಿದೆ.

Advertisement
