# Scam: ನರೇಗಾ ಯೋಜನೆಯಡಿ ಹಣ ಪಡೆಯಲು ಸೀರೆಯುಟ್ಟು ರೆಡಿಯಾದ ವ್ಯಕ್ತಿ

- Link: https://hosakannada.com/news/man-dressed-in-saree-to-get-money-under-nrega-scheme/
- Published: 2025-06-21T13:44:12+00:00
- Author: ಹೊಸಕನ್ನಡ ನ್ಯೂಸ್

Scam: ನರೇಗಾ ಯೋಜನೆಯಡಿ ಹಣ ಪಡೆಯಲು ಇಲ್ಲೊಬ್ಬ ವ್ಯಕ್ತಿ ಮಹಿಳೆ ರೀತಿ ಸೀರೆಯುಟ್ಟು ಫೋಟೋ ತೆಗೆಸಿಕೊಂಡು
ಹಣ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ನಡೆದಿದೆ .

Sponsored

ಚಿಕ್ಕನಾಳ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ನಡೆದಿತ್ತು. ಅದರ ಕೂಲಿ ಹಣ ಪಡೆಯಲು ವ್ಯಕ್ತಿಯೋರ್ವ
ಮಹಿಳೆಯ ರೀತಿ ವೇಷ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋವನ್ನು ಸ್ವತ ಗ್ರಾಮ ಪಂಚಾಯತಿ ಅಧಿಕಾರಿಗಳೇ
ಅಪ್‌ಲೋಡ್‌ ಮಾಡಿದ್ದಾರೆ. ಸೀರೆಯುಟ್ಟ ಪುರುಷನ ಫೋಟೋವನ್ನು ಮಂಗಳಮ್ಮ ಆರಿ ಎಂಬ ಹೆಸರಿನಲ್ಲಿ ಅಪ್‌ಲೋಡ್‌
ಮಾಡಿ ಬಿಲ್‌ ಪಡೆಯಲಾಗಿದೆ.

Advertisement

Advertisement

ಒಂದೇ ಫೋಟೊವನ್ನು ಮೂರು ಕಡೆ ಅಪ್‌ಲೋಡ್‌ ಮಾಡಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದ್ದು, ಇದರಿಂದಾಗಿ
ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂಬ ಅನುಮಾನ ಉಂಟಾಗಿದೆ. ಆದರೆ,
ಈ ಕುರಿತು ಪಂಚಾಯತ್‌ ರಾಜ್ ಇಲಾಖೆ ಅಧಿಕಾರಿಗಳಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಇದುವರೆಗೆ
ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

[ಇದನ್ನೂ ಓದಿ:Health: ಎಷ್ಟು ಆರೋಗ್ಯಕರವಾಗಿದ್ದರೂ ಕೂಡ ರಾತ್ರಿ ಈ ಆಹಾರ ತಿನ್ನಬೇಡಿ!](https://hosakannada.com/2025/06/21/no-matter-how-healthy-it-is-dont-eat-this-food-at-night/)

Advertisement
