# ಉಜಿರೆ ಎಸ್‌.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಮಕರಸಂಕ್ರಾಂತಿ ಆಚರಣೆ

- Link: https://hosakannada.com/news/makar-sankranti-celebration-at-ujire-sdm-cbse-school/
- Published: 2026-01-17T15:48:21+00:00
- Author: ಹೊಸಕನ್ನಡ ನ್ಯೂಸ್

ಉಜಿರೆ:ಜ17. ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ
ಸಂಘಗಳಲ್ಲೊಂದಾದ ‘ಕಲಾ ಸಿಂಧು’ ಸಾಂಸ್ಕೃತಿಕ ಸಂಘದ ವತಿಯಿಂದ ಭಾರತೀಯ ಹಬ್ಬಗಳಲ್ಲಿ ಒಂದಾದ ಮಕರಸಂಕ್ರಾಂತಿ
ಹಬ್ಬದ ಪ್ರಾಮುಖ್ಯತೆಯನ್ನು ತಿಳಿಸುವ ಅಂಗವಾಗಿ ಹಬ್ಬದ ಆಚರಣೆ ಮಾಡಲಾಯಿತು.

Sponsored

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಈ ದಿನದ ವೈಜ್ಞಾನಿಕ ವಿಶೇಷತೆ, ಹಬ್ಬದ ಆಚರಣೆಯ ವಿಧಾನಗಳು,
ಸಮೂಹ ಗಾಯನ ಹಾಗೂ ವಿದ್ಯಾರ್ಥಿಗಳು ಪರಸ್ಪರ ಎಳ್ಳು ಬೆಲ್ಲ ಹಂಚಿ ತಾವೇ ಗಾಳಿಪಟಗಳನ್ನು ತಯಾರಿಸಿ ಹಾರಿಸಿ
ಹಬ್ಬದ ಆಚರಣೆ ಮಾಡಿದರು.

Advertisement

Advertisement

ವಿದ್ಯಾರ್ಥಿನಿ ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
