# Mailaringeshwar Karnika: “ಇಟ್ಟ ರಾಮನ ಬಾಣ ಹುಸಿಯಲ್ಲ”- ಬೀರೂರು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ

- Link: https://hosakannada.com/news/mailaringeshwar-karnika-birur-mailaringeshwar-swami-karnika/
- Published: 2024-10-13T09:45:32+00:00
- Author: ಹೊಸಕನ್ನಡ ನ್ಯೂಸ್

Mailaringeshwar Karnika: ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ರವಿವಾರ(
ಇಂದು) ನಸುಕಿನ ಜಾವದಲ್ಲಿ ಮೈಲಾರಲಿಂಗ ಸ್ವಾಮಿಯು ಕಾರ್ಣಿಕ ನುಡಿದಿದ್ದಾರೆ. ಸ್ವಾಮಿಯ ಕಾರ್ಣಿಕ ಕೇಳಲು
ಸ್ಥಳದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಆಗಮನಿಸಿದ್ದರು. ನಸುಕಿನ ಜಾವ (ಅ.13) 4.45
ರಂದು ಸುಮಾರಿಗೆ ಕಾರ್ಣಿಕ ನುಡಿಯಲಾಗಿದ್ದು, ” ಇಟ್ಟ ರಾಮನ ಬಾಣ ಹುಸಿಯಲ್ಲ, ನ್ಯಾಯದ ತಕ್ಕಡಿ ಜರುಗಿತು,
ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿಗೆ ಸಂಪಾಯಿತಲೇ ಪರಾಕ್‌” ಎಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ
ನುಡಿದರು.

Sponsored

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ
ಸ್ವಾಮಿಯ ದೇವಸ್ಥಾನದಲ್ಲಿ ಈ ಕಾರ್ಣಿಕ ನುಡಿಯಲಾಗಿದೆ. ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ಹಲವು ಬಾರಿ
ನಿಜವಾಗಿದೆ.

Advertisement

Advertisement

**ಕಾರ್ಣಿಕ ಅರ್ಥ; **
 **ನ್ಯಾಯದ ತಕ್ಕಡಿ ಜರುಗಿತ್ತು:** ರಾಜ್ಯದಲ್ಲಿ ನ್ಯಾಯಕ್ಕೆ ಜಯವಿಲ್ಲ. ಅನ್ಯಾಯಕ್ಕೆ
ಜಯವಾಗುತ್ತದೆ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯ ದೊರಕುತ್ತದೆ.

**ಜ್ಞಾನದ ಹಣತೆ ಹಚ್ಚಿದರು:** ಜ್ಞಾನಿಗಳು ರಾಜ್ಯದಲ್ಲಿ ನಡೆಯುವಂತಹ ಘಟನೆ ಕುರಿತು ಮೊದಲೇ ಮುನ್ಸೂಚನೆ
ನೀಡುತ್ತಾರೆ.

**ಜೀವ ರಾಶಿಗೆ ಸಂಪಾಯಿತಲೇ ಪರಾಕ್‌ ;** ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸಕಲ ಜೀವ ರಾಶಿಗಳು ಸಂಪಾಗಿರುತ್ತದೆ.

Advertisement
