# ಮಡಿಕೇರಿ: ಅ.17 ರಂದು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

- Link: https://hosakannada.com/news/madikeri-on-aug-17-the-kaveri-river-will-originate-in-talakaveri/
- Published: 2026-09-22T11:35:48+00:00
- Author: ಹೊಸಕನ್ನಡ ನ್ಯೂಸ್

ಮಡಿಕೇರಿ: ಈ ಬಾರಿ ತಲಕಾವೇರಿಯ ಕಾವೇರಿ ಮಾತೆಯ ಕುಂಡಿಕೆಯಲ್ಲಿ ಅ.17 ರಂದು ರಾತ್ರಿ 7.50ರ ಮೇಷ ಲಗ್ನದಲ್ಲಿ
ಕಾವೇರಿ ತೀರ್ಥೋದ್ಭವ ಜರುಗಲಿದೆ.

Sponsored

ಭಾಗಮಂಡಲ-ತಲಕಾವೇರಿ ಜಾತ್ರಾ ಮಹೋತ್ಸವದ ವೇಳಾಪಟ್ಟಿ ಪ್ರಕಟವಾಗಿದೆ. ಶಾಸ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ
ಕಾರ್ಯಕ್ರಮಗಳ ದಿನಾಂಕ ಘೋಷಣೆ ಮಾಡಲಾಗಿದೆ.

Advertisement

Advertisement

ಸೆ.27 ರಂದು ಬೆಳಗ್ಗೆ 8.45 ಕ್ಕೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ
ಅಕ್ಷಿ, ಅ.5 ರಂದು ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.15 ರಂದು ಮಧ್ಯಾಹ್ನ
12.35 ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಹಾಗೂ ಸಂಜೆ 6.30ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿ
ಪೂಜೆ ನಡೆಯಲಿದೆ.

Advertisement
