# LPG: ಇನ್ಮುಂದೆ ಬೇಡ LPG ಸಮಸ್ಯೆಯ ಚಿಂತೆ  – ಯಾವ ಪ್ರೂಫ್ ಇಲ್ದೆ ಸಿಗಲಿದೆ 5 ಕೆಜಿ ಸಿಲಿಂಡರ್! ಹೇಗೆ ಪಡೆಯುವುದು?

- Link: https://hosakannada.com/news/lpg-no-more-worries-about-lpg-problem-without-any-proof-you-will-get-5-kg-cylinder-how-to-get-it/
- Published: 2026-04-05T07:55:28+00:00
- Author: ಹೊಸಕನ್ನಡ ನ್ಯೂಸ್

LPG: ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್
ಪಿ ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಂತೂಇದರ ಸಮಸ್ಯೆ ತುಸು ಹೆಚ್ಚು ಎಂದು ಹೇಳಬಹುದು.
ಎಲ್ಪಿಜಿ ಸಮಸೆಯಿಂದ ಜನರನ್ನು ಪಾರು ಮಾಡಲು ಭಾರತ ಸರ್ಕಾರವು ಸತತವಾಗಿ ಪ್ರಯತ್ನಿಸುತ್ತಿದೆ. ಈ ಬೆನ್ನನಲ್ಲೇ
ಇದೀಗ ಕೇಂದ್ರ ಸರ್ಕಾರವು ಜನರಿಗೆ ನೆರವಾಗಲೆಂದು 5 ಕೆಜಿ ಸಿಲಿಂಡರನ್ನು ವಿತರಿಸಲು ಮುಂದಾಗಿದೆ. 

Sponsored

ಭಾರತೀಯ ನಾಗರಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಸ್ಥಳೀಯ ವಿಳಾಸದ ದಾಖಲೆ ಇಲ್ಲದವರಿಗೆ
ಅನುಕೂಲ ಮಾಡಿಕೊಡಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 5 ಕೆಜಿ ತೂಕದ FTL(
Free Trade LPG) ಸಿಲಿಂಡರ್‌ಗಳ ನಿಯಮವನ್ನು ಸರಳಗೊಳಿಸಿದೆ. ಹಾಗಿದ್ದರೆ ಇದನ್ನು ಪಡೆಯುವುದು ಹೇಗೆ?
ಇಲ್ಲಿದೆ ನೋಡಿ ಮಾಹಿತಿ.

Advertisement

Advertisement

ಯಾವ ದಾಖಲೆಗಳು ಬೇಕು?

5 ಕೆಜಿಯ ಸಿಲಿಂಡರ್ ಅನ್ನೋ ಪಡೆಯಲು ಬಾಡಿಗೆ ಕರಾರು ಅಥವಾ ವಿಳಾಸದ ದಾಖಲೆಗಳ ಅಗತ್ಯವಿಲ್ಲ. ಆಧಾರ್
ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯನ್ನು ಸಿದ್ಧವಾಗಿಟ್ಟುಕೊಳ್ಳಿ
ಸಾಕು. 

**ಎಲ್ಲಿ ಸಿಗುತ್ತೆ?**

ನಿಮ್ಮ ಹತ್ತಿರದ ಗ್ಯಾಸ್ ವಿತರಕರು (Indane, HP, Bharat Gas), ಆಯ್ದ ಪೆಟ್ರೋಲ್ ಬಂಕ್‌ಗಳು ಅಥವಾ
ಕಿರಣಾ ಅಂಗಡಿಗಳಿಗೆ ಭೇಟಿ ನೀಡಿ ವಿಳಾಸದ ದಾಖಲೆ ಇಲ್ಲದೆ ‘ಛೋಟು’ (Chhotu) ಅಥವಾ 5 ಕೆಜಿ ಎಫ್‌ಟಿಎಲ್
ಸಿಲಿಂಡರ್ ಬೇಕೆಂದು ಕೇಳಿ. ಹಣ ಪಾವತಿಸಿ ತಕ್ಷಣವೇ ಸಿಲಿಂಡರ್ ಪಡೆಯಿರಿ.

ನಗರ ಪ್ರದೇಶಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಕಡಿಮೆ ಅನಿಲ ಬಳಸುವ 
ಸಣ್ಣ ಕುಟುಂಬಗಳಿಗೆ ಈ ಕ್ರಮವು ವರದಾನವಾಗಲಿದೆ. ಕಳೆದ ಮಾರ್ಚ್ 23 ರಿಂದ ಈವರೆಗೆ ಸುಮಾರು 5.7 ಲಕ್ಷ
ಇಂತಹ ಸಣ್ಣ ಸಿಲಿಂಡರ್‌ಗಳು ಮಾರಾಟವಾಗಿವೆ. ಏಪ್ರಿಲ್ 4 ರಂದು ಒಂದೇ ದಿನ 71,000 ಕ್ಕೂ ಹೆಚ್ಚು ಸಿಲಿಂಡರ್‌ಗಳು
ಮಾರಾಟವಾಗುವ ಮೂಲಕ ಭಾರಿ ಬೇಡಿಕೆ ವ್ಯಕ್ತವಾಗಿದೆ.

Advertisement
