# ಓಡಿ ಹೋಗಿ ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಸಂಧಾನಕ್ಕೆಂದು ಕರೆದು, ಅಳಿಯನಿಗೆ ಚಾಕು ಹಾಕಿದ ಮನೆಯವರು !

- Link: https://hosakannada.com/news/love-marriage-and-death/
- Published: 2022-03-12T08:02:28+00:00
- Author: ಹೊಸಕನ್ನಡ ನ್ಯೂಸ್

ಚೆಲುವಿನ ಚಿತ್ತಾರ ಸಿನಿಮಾ ಯಾರು ನೋಡಿಲ್ಲ ಹೇಳಿ. ಎಲ್ಲರೂ ನೋಡಿರುತ್ತಾರೆ. ಅದ್ಭುತ ಅಭಿನಯದಿಂದ 
ಮನಸೂರೆಗೊಂಡ ಸಿನಿಮಾ ಅದು. ಇಬ್ಬರು ಪ್ರೇಮಿಗಳು ಮನೆ ಬಿಟ್ಟು ಬರ್ತಾರೆ. ಸಂಧಾನಕ್ಕೆ ಅಂತ ಕರೆಸಿಕೊಂಡ‌
ಮನೆಯವರು ಇಬ್ಬರನ್ನು ದೂರ ದೂರ ಮಾಡುತ್ತಾರೆ. ಆ ತರಹದೇ ಒಂದು ಕಥೆ ಇಲ್ಲಿ ನಿಜ ಜೀವನದಲ್ಲಿ ನಡೆದಿದೆ.

Sponsored

ಹುಡುಗಿ ಹೆಸರು ಸುಶ್ಮಿತಾ. ಇವನ ಹೆಸರು ಪ್ರೀತಂ. ಕಲಬುರಗಿ ಮೂಲದ ಜೋಡಿ ಇದು. ಪ್ರೀತಂ ಸಹೋದರಿ ಡೇಸಿ
ಬಳಿ ಸುಶ್ಮಿತಾ ಟ್ಯೂಷನ್ ಗೆ ಬರ್ತಿದ್ಳು. ಈ ಸಮಯದಲ್ಲಿ ಇಬ್ಬರಿಗೂ ಪ್ರೇಮ ಶುರುವಾಗಿದೆ. ಆದರೆ ಈ 
ವಿಷಯ ಸುಶ್ಮಿತಾ ಮನೆಯವರಿಗೆ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತವಾಗಿದೆ. ಕಳೆದ ವರ್ಷ ಇಬ್ಬರೂ ಬೀದರ್
ನಲ್ಲಿ ಮದುವೆಯಾಗಿ, ಬೆಂಗಳೂರಿಗೆ ಓಡಿ ಹೋಗಿ ವಾಸವಿದ್ದರು. ಈ ವೇಳೆ ಒಂದು ದಿನ ಫೋನ್ ಮಾಡಿದ ಮಧ್ಯವರ್ತಿ
ಮೆಹಬೂಬ್ ಇಬ್ಬರ ಮಧ್ಯೆ ಸಂಧಾನದ ಮಾತನಾಡಿದ್ದಾರೆ‌. ಹೀಗಾಗಿ ಮೆಹಬೂಬ್ ಮಾತು ನಂಬಿ ಕಲಬುರಗಿಗೆ ಬಂದಿದ್ದಾರೆ
ಪ್ರೇಮಿಗಳು. ಮನೆಯವರಿಗೆ ಸರ್ಪೈಸ್ ಕೊಡೋಣ ಅಂತಾ ಈ ಜೋಡಿ ತಿಳಿದುಕೊಂಡಿದ್ದರಂತೆ.

Advertisement

Advertisement

ಸಂಧಾನಕ್ಕೆ ಅಂತ ಕರೆದ ಮೆಹಬೂಬ್ ಪ್ರೀತಂಗೆ ಮುಹೂರ್ತ ಇಟ್ಟಿದ್ದಾನೆ. ಮಾರ್ಚ್ 3 ರಂದು ಮೆಹಬೂಬ್ ನನ್ನು
ಭೇಟಿಯಾದ ಪ್ರೀತಂ ನಂತರ ಮನೆಗೆ ಬಂದಿದ್ದಾನೆ. ಇದಾದ ನಂತರ ಮನೆಯವರನ್ನು ಬಿಡೋಕೆ ರೈಲ್ವೇ ಸ್ಟೇಷನ್
ಗೆ ಹೋಗಿ ವಾಪಸ್ ಬರಬೇಕಾದರೆ ಕಾದು ಕುಳಿತಿದ್ದ ಹುಡುಗಿ ಮನೆಯವರು ಪ್ರೀತಂ ಹೊಟ್ಟೆಗೆ ಚಾಕು ಹಾಕಿ 
ಕೊಲೆ ಮಾಡಿದ್ದಾರೆ.

![](https://hosakannada.com/wp-content/uploads/2022/03/IMG_20220312_075842.jpg)

ಮರ್ಯಾದೆಗೆ ಹೆದರಿದ ಸುಶ್ಮಿತಾಳ ಮನೆಯವರು ತಾಳ್ಮೆ ಕಳೆದುಕೊಂಡು ಅಳಿಯನನ್ನೇ ಬರ್ಬರವಾಗಿ ಕೊಲೆಗೈದು
ಜೈಲು ಸೇರಿದ್ದಾರೆ. ಇದೀಗ ಈ ಕೊಲೆ ಸಂಬಂಧಪಟ್ಟಂತೆ ಯುವತಿಯ ಚಿಕ್ಕಪ್ಪ ಅರವಿಂದ ಡೆಂಕಿ, ಅಜ್ಜ ಶಿವಪುತ್ರಪ್ಪ
ಡೆಂಕಿ, ಮೆಹಬೂಬ್ ಮಂಜೂರು ಅಲಿಶೆಕ್ ಮತ್ತು ಮದನ್ ಗೋಪಾಲ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಸುಶ್ಮಿತಾ ಕಣ್ಣೀರು ಹಾಕುತ್ತಿದ್ದಾಳೆ.

![](https://hosakannada.com/wp-content/uploads/2022/03/IMG_20220312_075901.jpg)

Advertisement
