# ಸಾಲ ತೀರಿಸಲಾಗದ ಸಾಲಗಾರನ ಮನೆಗೆ ಬಂದ ಅಧಿಕಾರಿಗಳ ಮೇಲೆ ತನ್ನ ಸಾಕು ನಾಯಿಯನ್ನು ಛೂ ಬಿಟ್ಟ ಸಾಲಗಾರ!

- Link: https://hosakannada.com/news/loan/
- Published: 2022-03-03T12:13:52+00:00
- Author: ಹೊಸಕನ್ನಡ ನ್ಯೂಸ್

ಜನರು ಬ್ಯಾಂಕ್ ನಿಂದ ಸಾಲ ಮಾಡುವುದು ನಂತರ ಅದನ್ನು ಹಿಂತಿರುಗಿಸುವುದು ಇದು ಎಲ್ಲರಿಗೂ ಗೊತ್ತೇ ಇದೆ.
ಹಾಗೆನೇ ಸಾಲ ಮಾಡಿದ ಬಾಕಿ ಮೊತ್ತದ ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್ ನವರು ಸಾಲದ ವಸೂಲಾತಿಗೆ
ತಮ್ಮದೇ ಆದ ಮಾರ್ಗವನ್ನು ಅನುಸರಿಸುತ್ತಾರೆ. ಹೀಗೆ ಬ್ಯಾಂಕ್ ನವರು ಒಬ್ಬನ ಮನೆಗೆ ಮನೆ ಜಪ್ತಿ ಮಾಡಲೆಂದು
ಮನೆ ಮಾಲೀಕ ಸಾಲಗಾರ ತನ್ನ ಮನೆಯ ನಾಯಿಗಳನ್ನೇ ಬಿಟ್ಟಿದ್ದಾನೆ.

Sponsored

ಈ ಘಟನೆ ನಡೆದಿರುವುದು ಕೊಚ್ಚಿಯಲ್ಲಿ. ಬ್ಯಾಂಕ್ ಒಂದರಿಂದ ವ್ಯಾಪಾರ ಮಾಡಲು ಏಳು ಕೋಟಿ ರೂಪಾಯಿ ಸಾಲ
ಪಡೆದು ಅದನ್ನು ವಾಪಾಸು ಮಾಡದ ಅಣ್ಣಮ್ಮ ಚೆರಿಯನ್ ಎಂಬ ಸಾಲಗಾರ ಹಾಗೂ ಆತನ ಕುಟುಂಬಸ್ಥರು ಈ ರೀತಿಯ
ಕ್ರಮ ಮಾಡಿದ್ದಾರೆ.

Advertisement

Advertisement

ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಆದೇಶದ ಅನ್ವಯ ಮನೆಯನ್ನು ಸೀಜ್ ಮಾಡಲು
ಬಂದಿದ್ದರು. ಆಗ ಅಧಿಕಾರಿಗಳ ಮೇಲೆ ಮೂರು ನಾಯಿಗಳನ್ನು ಛೂ ಬಿಡಲಾಗಿದೆ. ಬ್ಯಾಂಕ್ ಅಧಿಕಾರಿಗಳಿಗೆ 
ಏನು ಮಾಡುವುದೆಂದು ತಿಳಿಯದೇ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಸಾಲಗಾರನ ಮಗ ಬೇರೆ ಚಾಕು ಹಿಡಿದುಕೊಂಡು
ಹಲ್ಲೆ ಮಾಡಲು ಕೂಡಾ ಮುಂದಾಗಿದ್ದಾನೆ.

ಸಾಲವಸೂಲಾತಿಗೆ ಅಧಿಕಾರಿಗಳು ಮನೆಗೆ ಬಂದಾಗ ಅಟ್ಯಾಕ್ ಮಾಡಬೇಕೆಂದು ನಾಯಿಗಳಿಗೆ ತರಬೇತಿ ನೀಡುತ್ತಿದ್ದನಂತೆ
ಈ ಭೂಪ.

ಈಗ ಅಧಿಕಾರಿಗಳು ಹಲ್ಲೆಗೊಳಗಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement
