# Viral Video: ಜ್ವಾಲಾಮುಖಿಯ ತುದಿಯಲ್ಲಿ ಪಿಜ್ಜಾ ಬೇಯಿಸಿ ಸವಿದ ಮಹಿಳೆ

- Link: https://hosakannada.com/news/latest-news-viral-video-woman-cooked-and-ate-pizza-in-a-volcano/
- Published: 2023-07-15T17:07:26+00:00
- Author: ಕಾವ್ಯ ವಾಣಿ

Pizza: ಜ್ವಾಲಾಮುಖಿಯಿಂದ ಪಿಜ್ಜಾವನ್ನು ಬೇಯಿಸಿ ತಿನ್ನಬಹುದು ಎಂದು ಇಲ್ಲೊಬ್ಬಳು ಚಾಣಕ್ಯೆ ತಿಳಿಸಿ
ಕೊಟ್ಟಿದ್ದಾಳೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋವೊಂದರಲ್ಲಿ ಈ ಮಾಹಿತಿ ಬೆಳಕಿಗೆ 
ಬಂದಿದೆ.

Sponsored

ಅಲೆಕ್ಸಾಂಡ್ರಾ ಬ್ಲೊಡ್ಜೆಟ್ Instagram ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಗ್ವಾಟೆಮಾಲಾದಲ್ಲಿ
ಅವರ ಪ್ರವಾಸದ ಆಸಕ್ತಿದಾಯಕ ಕ್ಷಣಗಳು ಕಾಣಬಹುದಾಗಿದೆ. ಅಲೆಕ್ಸಾಂಡ್ರಾ ಕುದಿಯುತ್ತಿದ್ದ ಜ್ವಾಲಾಮುಖಿಯಿಂದ
ಪಿಜ್ಜಾವನ್ನು ಬೇಯಿಸಿ ತಿಂದಿರುವುದು ಕಾಣಬಹುದು.

Advertisement

Advertisement

ಈ ಪೋಸ್ಟ್ ನಲ್ಲಿ ಬಹುಶಃ ನಾವು ಇದಕ್ಕೆಂದೇ ಅಲ್ಲಿಗೆ ಪ್ರಯಾಣಿಸಿಲ್ಲ, ಆದರೆ ಇದೊಂದು ರೀತಿಯಲ್ಲಿ 
ನಮ್ಮ ಮೋಜಿಗೆ ಬೋನಸ್ ನೀಡಿದಂತಿತ್ತು ಎಂದು ಈ ವಿಡಿಯೋಗೆ ಶಿರ್ಷಿಕೆ ನೀಡಲಾಗಿದೆ. ಈ ವೀಡಿಯೊ 1.2 
ಮಿಲಿಯನ್ ವೀಕ್ಷಣೆ ಆಗಿದ್ದು ಮತ್ತು ಲಕ್ಷಗಟ್ಟಲೇ ಕಮೆಂಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ ವಿಶಿಷ್ಟ ಖಾದ್ಯವನ್ನು ಕಂಡು ಜನ ಬೆರಗಾದರು. ಇನ್ನು ಪಿಜ್ಜಾ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು
ಹಲವರು ಕಮೆಂಟ್ ಮಾಡಿ ಕೇಳಿದ್ದಾರೆ.

 

https://youtu.be/rTW_V8GUYgI

 

ಇದನ್ನು ಓದಿ:[ Aeolus Satellite : ಮನುಕುಲಕ್ಕೆ ಹೊಸ ಕಂಟಕ: ಇನ್ನು ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಭಾರೀ ಗಾತ್ರದ ಉಪಗ್ರಹ ! ](https://hosakannada.com/2023/07/15/latest-news-aeolus-satellite-huge-satellite-will-come-to-earth-in-a-few-weeks/)

Advertisement
