# Viral News: ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ ಯೋಚಿಸಿ, ಬರಿಗೈಯಲ್ಲಿ ವಾಪಸ್ ಆದ್ರೆ ಬೀಳುತ್ತೆ 500 ದಂಡ !

- Link: https://hosakannada.com/news/latest-news-viral-news-think-before-going-to-the-store-because-500-fine-if-you-return-empty-hand/
- Published: 2023-07-20T14:56:39+00:00
- Author: ವಿದ್ಯಾ ಗೌಡ

Viral News: ಸಾಮಾನ್ಯವಾಗಿ ಅಂಗಡಿಗಳಿಗೆ ಗಿರಾಕಿಗಳು ಹೋದರೆ ವಸ್ತು ಕೊಳ್ಳೋದಕ್ಕಿಂತ ಮಾತೇ ಜಾಸ್ತಿ.
ಕೆಲವರಂತೂ ಎಲ್ಲಾ ವಸ್ತುಗಳನ್ನು ಅದರ ಸ್ಥಳದಿಂದ ಹೊರದಬ್ಬಿ ಒಮ್ಮೆ ಕಣ್ಣಾಡಿಸಿ ಕೊನೆಗೆ ಬೇಡ ಎಂದು
ಹೊರಟು ಬಿಡುತ್ತಾರೆ. ಆದರೆ, ಈ ಅಂಗಡಿಯಲ್ಲಿ ಹಾಗಲ್ಲ. ಈ ಅಂಗಡಿಗೆ ಎಂಟ್ರಿ ಕೊಡೋ ಮುನ್ನ 100 ಸಲ 
ಯೋಚಿಸ್ಬೇಕಾಗುತ್ತೆ, ಯಾಕಂದ್ರೆ ಅಂಗಡಿಗೆ ನುಗ್ಗಿ ಏನೂ ಕೊಳ್ಳದೆ ಬರಿಗೈಯಲ್ಲಿ ವಾಪಸ್ ಬಂದ್ರೆ 500
ದಂಡ ಬೀಳುತ್ತೆ!

Sponsored

ಸ್ಪೇನ್​ನ ಬಾರ್ಸಿಲೋನಾದಲ್ಲಿನ ಕಿರಾಣಿ ಅಂಗಡಿಯ ಮಾಲಿಕ ಕ್ವಿವಿಯರ್ಸ್ ಮುರ್ರಿಯಾ ಎಂಬ ವ್ಯಕ್ತಿ ತನ್ನ
ಅಂಗಡಿ ಮುಂಭಾಗದಲ್ಲಿ
 ‘ಯಾರೇ ಬರಲಿ ನೋಡಲು ಬಂದರೂ 500 ರೂಪಾಯಿ ದಂಡ ತೆರಬೇಕಾಗುತ್ತದೆ’ ಎಂದು ಬರೆದಿರುವ
ಸೂಚನಾ ಫಲಕದ ಫೋಟೋ ತೂಗುಹಾಕಿದ್ದಾನೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral
News) ಆಗುತ್ತಿದೆ.

Advertisement

Advertisement

ಕ್ವಿವಿಯರ್ಸ್ ಕಿರಾಣಿ ಅಂಗಡಿಯನ್ನು 1898ರಲ್ಲಿ ಪ್ರಾರಂಭಿಸಿದ್ದಾನೆ. ಈ ಅಂಗಡಿಯನ್ನು ಚೆನ್ನಾಗಿ 
ಅಲಂಕರಿಸಲಾಗಿದೆ. ಪ್ರತಿ ವರ್ಷ ಈತನ ಅಂಗಡಿಯನ್ನು ನೋಡಲು ಜನರು, ಪ್ರವಾಸಿಗರು ಬರುತ್ತಾರೆ.
 ಹೆಚ್ಚಿನವರು
ಏನನ್ನೂ ಕೊಳ್ಳದೆ, ಅಂಗಡಿಯ ಒಳಭಾಗವನ್ನು ನೋಡಿ ನಂತರ ಹೊರಡುತ್ತಾರೆ. ಕೆಲವು ಜನರು ಪರಸ್ಪರ ಫೋಟೋ-
ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಹೊರಡುತ್ತಾರೆ. ಪ್ರಸ್ತುತ ಈ ಅಂಗಡಿಯನ್ನು ಟೋನಿ ಮರಿನೋ ನಡೆಸುತ್ತಿದ್ದಾರೆ.
ಇದೆಲ್ಲದರಿಂದ ಬೇಸತ್ತ ಅಂಗಡಿಯವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಜನರು ಅಂಗಡಿಗೆ ಬಂದು ಏನೂ ಕೊಳ್ಳದೆ ಸುಮ್ಮನೆ ಹೋಗುತ್ತಿರುವುದಕ್ಕೆ ಕಡಿವಾಣ ಹಾಕಲು ದಂಡ ಫಿಕ್ಸ್ 
ಮಾಡಿದ್ದಾರೆ.
 ‘ನೋಡಲು ಮಾತ್ರ ಒಳಗೆ ಬರಬೇಕಾದರೆ 5 ಯೂರೋ (461 ರೂಪಾಯಿ) ಕೊಡಬೇಕು ಎಂದು ಬರೆದ ಬೋರ್ಡ್
ಅನ್ನು ಅಂಗಡಿಯೊಳಗೆ ತೂಗುಹಾಕಿದ್ದಾರೆ. ಸದ್ಯ ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​
ಆಗುತ್ತಿದೆ.

 

ಇದನ್ನು ಓದಿ:[ Youtubers: ನೀವೂ ಯೂಟ್ಯೂಬ್‌ನಿಂದ ಹಣ ಗಳಿಸ್ತಿದ್ದೀರಾ ?! ಹಾಗಿದ್ರೆ ಕೂಡಲೇ ಈ ಕೆಲಸ ಮಾಡಿ. ಇಲ್ಲ ಅಪಾಯ ಕಟ್ಟಿಟ್ಟ ಬುತ್ತಿ!! ](https://hosakannada.com/2023/07/20/latest-news-youtubers-you-are-making-money-from-youtube-then-read-this-story/)

Advertisement
