# KPSC : 1010 FDA ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ |ಆಯುಷ್ ಇಲಾಖೆ ಔಷಧ ವಿತರಕರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

- Link: https://hosakannada.com/news/kpsc-first-division-assistant-2019-rpc-additional-list-and-ayush-dept-pharmacist-final-list-2021/
- Published: 2022-11-11T11:30:07+00:00
- Author: Mallika

ಕರ್ನಾಟಕ ಲೋಕಸೇವಾ ಆಯೋಗವು ( KPSC) [2019-20](https://hosakannada.com/news/kpsc-first-division-assistant-2019-rpc-additional-list-and-ayush-dept-pharmacist-final-list-2021/201920)
ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 1010 ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ
ನೇಮಕಾತಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.

Sponsored

ಕೆಪಿಎಸ್‌ಸಿ’ಯು ದಿನಾಂಕ [31-01-2020](https://hosakannada.com/news/kpsc-first-division-assistant-2019-rpc-additional-list-and-ayush-dept-pharmacist-final-list-2021/31012020)
ರ ಅಧಿಸೂಚನೆ ಮತ್ತು ಸೇರ್ಪಡೆ ಅಧಿಸೂಚನೆ ಹಾಗೂ ತಿದ್ದುಪಡಿ ಅಧಿಸೂಚನೆಗಳನ್ವಯ ಉಳಿಕೆ ಮೂಲ ವೃಂದದ 
1010 ಎಫ್‌ಡಿಎ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿತ್ತು. ದಿನಾಂಕ [07-06-2022](https://hosakannada.com/news/kpsc-first-division-assistant-2019-rpc-additional-list-and-ayush-dept-pharmacist-final-list-2021/07062022)
ರಂದು ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿತ್ತು.
2020ನೇ ಸಾಲಿನ ಉಳಿಕೆ ಮೂಲ ವೃಂದದ 1010 ಎಫ್‌ಡಿಎ
ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ 336 ಅಭ್ಯರ್ಥಿಗಳ ಹೆಸರನ್ನು ನೀಡಲಾಗಿತ್ತು. ಅಭ್ಯರ್ಥಿಗಳ
ಪೂರ್ಣ ವಿಳಾಸ, ಆಯ್ಕೆಯಾದ ಮೀಸಲಾತಿ / ಕೆಟಗರಿ ವಿವರ, ಸ್ಪರ್ಧಾತ್ಮಕ ಪರೀಕ್ಷೆ ಅಂಕಗಳನ್ನು ನೀಡಲಾಗಿದೆ.

Advertisement

Advertisement

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಆಯುಷ್ ಇಲಾಖೆಯ ಔಷಧ ವಿತರಕರ ಹುದ್ದೆಗಳ ನೇಮಕಾತಿ ಸಂಬಂಧ, ಅಂತಿಮ
ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು
ಅಂತಿಮ ಆಯ್ಕೆಪಟ್ಟಿಯನ್ನು ಕೆಳಗಿನಂತೆ ಚೆಕ್‌ ಮಾಡಬಹುದು.

2021-22ನೇ ಸಾಲಿನ ಆಯುಷ್ ಇಲಾಖೆಯ ಔಷಧ ವಿತರಕರು 60 ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಅಂತಿಮ ಆಯ್ಕೆಪಟ್ಟಿ
ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ದಿನಾಂಕ 10-10-2022 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿ,
ಸದರಿ ಆಯ್ಕೆಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿ, ಸ್ವೀಕರಿಸಿದ ಆಕ್ಷೇಪಣೆಗಳನ್ನು
ಪರಿಶೀಲಿಸಿದ ನಂತರ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ.
ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು
ಪಡೆದಿದ್ದ ಅಭ್ಯರ್ಥಿಗಳು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಂತಿಮ ಆಯ್ಕೆಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಿ

ಹೆಚ್ಚಿನ ಮಾಹಿತಿಗಾಗಿ ಈ [ಲಿಂಕ್ ಕ್ಲಿಕ್ ಮಾಡಿ](https://kpsc.kar.nic.in/)

Advertisement
