# ಕಡಬ: ಅತ್ತೆಯಿಂದ ಸೊಸೆಯ ವಿರುದ್ಧ ದೂರು: ಜೀವ ಬೆದರಿಕೆ ಆರೋಪ

- Link: https://hosakannada.com/news/kodagu-daughter-in-law-files-complaint-against-father-in-law-allegation-of-threatening-life/
- Published: 2026-10-21T08:07:11+00:00
- Author: ಹೊಸಕನ್ನಡ ನ್ಯೂಸ್

ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆಯೊಬ್ಬರು ಜೀವ ಬೆದರಿಕೆ ಹಾಕಿ, ಮನೆಯ ಕಿಟಕಿ ಗಾಜಿಗೆ
ಕಲ್ಲೆಸೆದು ಹಾನಿ ಮಾಡಿರುವುದಲ್ಲದೆ, ಕಲ್ಲಿನಿಂದ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ 70 ವರ್ಷದ ವೃದ್ಧೆಯೊಬ್ಬರು
ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Sponsored

ಕಡಬದ ಕೊಯಿಲ ನಿವಾಸಿ ನೀಲಮ್ಮ (70) ದೂರು ನೀಡಿದ ಮಹಿಳೆ. ಇವರ ಸೊಸೆ ಮಂಗಳಾ ಬಾಯಿ ಅ.12 ರಂದು ಸಂಜೆ
ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದರು. ನಂತರ ಅ.14 ರಂದು ರಾತ್ರಿ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆದು
ಹಾನಿ ಮಾಡಿದ್ದು, ಸುಮಾರು ರೂ.30 ಸಾವಿರ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Advertisement

Advertisement

ಅಲ್ಲದೆ ಕಲ್ಲು ನೀಲಮ್ಮ ಅವರಿಗೆ ತಗುಲಿ ಗಾಯವಾಗಿದ್ದು, ಅವಾಚ್ಯವಾಗಿ ನಿಂದನೆ ಮಾಡಿ ಜೀವ ಬೆದರಿಕೆ
ಹಾಕಿದ್ದಾರೆ ಎನ್ನಲಾಗಿದೆ. ಗಾಯಗೊಂಡ ನೀಲಮ್ಮ ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಕುರಿತು ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement
