# ರಿಂಗ್ ನಲ್ಲಿ ಒಂದೇ ಏಟಿಗೆ ಹೊರಟೇ ಹೊಯ್ತು 24 ರ ಕಿಕ್ ಬಾಕ್ಸರ್ ನ ಪ್ರಾಣ !

- Link: https://hosakannada.com/news/kick-boxing-boxer-death/
- Published: 2022-07-14T11:47:09+00:00
- Author: ಹೊಸಕನ್ನಡ ನ್ಯೂಸ್

ಕಿಕ್ ಬಾಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದ ಯುವಕನೋರ್ವ ದಾರುಣವಾಗಿ ಮೃತಹೊಂದಿದ ಘಟನೆಯೊಂದು ನಡೆದಿದೆ.
ಮೈಸೂರಿನ ಯುವಕನೋರ್ವ ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ.

Sponsored

ನಿಖಿಲ್ (24) ಎಂಬಾತನೇ ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್
ವತಿಯಿಂದ ಜುಲೈ 10ರಂದು ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಖಿಲ್
ಪಾಲ್ಗೊಂಡಿದ್ದರು. ಕಿಕ್ ಬಾಕ್ಸಿಂಗ್‌ನ ರಿಂಗ್‌ನಲ್ಲಿ ಸೆಣಸಾಡುವಾಗ, ಎದುರಾಳಿಯು ನಿಖಿಲ್ ತಲೆಗೆ 
ಏಟು ಬಿದ್ದಿದೆ. ಕೂಡಲೇ, ಏಟಿಗೆ ಬಾಕ್ಸಿಂಗ್ ರಿಂಗ್‌ನಲ್ಲೇ ನಿಖಿಲ್ ಕೆಳಗೆ ಬಿದ್ದಿದ್ದಾರೆ. ನಂತರ
ಮೇಲಕ್ಕೆ ಏಳಲೇ ಇಲ್ಲ. ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ 
ಎರಡು ದಿನ ಕೋಮಾದಲ್ಲಿ ಸೆಣಸಾಡಿ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.

Advertisement

Advertisement

ನಿಖಿಲ್ ತಂದೆ ಕೂಡಾ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡಬೇಕೆಂದು 
ನಿಖಿಲ್ ಕನಸು ಕಂಡಿದ್ದ. ಆದರೆ, ವಿಧಿ ನಿಖಿಲ್ ಹಣೆಯಲ್ಲಿ ಬೇರೆನೇ ಬರೆದಿತ್ತು. ನಿಖಿಲ್ ಕೊನೇ ಕ್ಷಣದ
ವೀಡಿಯೋ ನೋಡಿ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಿಕ್ ಬಾಕ್ಸಿಂಗ್‌ನ ರಿಂಗ್‌ನಲ್ಲಿ ನಿಖಿಲ್
ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement
