# Kodagu: ಏಕಾಂಗಿಯಾಗಿ ಚಾರಣಕ್ಕೆ ಹೋದ ಕೇರಳ ಯುವತಿ ನಾಪತ್ತೆ!!

- Link: https://hosakannada.com/news/kerala-girl-goes-missing-while-hiking/
- Published: 2026-04-03T16:01:47+00:00
- Author: ಹೊಸಕನ್ನಡ ನ್ಯೂಸ್

Kodagu: ಮಡಿಕೇರಿ ಬಳಿಯ ತಡಿಯಂಡಮೊಳ್ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಕೇರಳ ಮೂಲದ ಯುವತಿಯೊಬ್ಬರು
ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. 

Sponsored

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಕೇರಳ ಮೂಲದ ಯುವತಿ ಶರಣ್ಯ ಜಿ.ಎಸ್. 
ನಿನ್ನೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ‌ಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದಾಳೆ. ಖಾಸಗಿ ಹೋಂಸ್ಟೇಯಲ್ಲಿ
ತಂಗಿದ್ದ ಯುವತಿ ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದಳು. ಆ ಪ್ರದೇಶದಲ್ಲಿ ಕಾಡಾನೆಗಳ
ಕಾಟ ಇರುವ ಕಾರಣ ಬೇರೆಯವರ ಜತೆ ಸಿಬ್ಬಂದಿ ಕಳುಹಿಸಿದ್ದರು. ಕೊನೆಯಲ್ಲಿ‌ ನಾಯಿಗಳ‌ಜೊತೆ ಆಟವಾಡುತ್ತಾ
ಹಿಂದುಳಿದ ಶರಣ್ಯ ಉಳಿದವರ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

Advertisement

Advertisement

ನಾಪತ್ತೆಯಾದ ಯುವತಿ ಶರಣ್ಯಾ ಪತ್ತೆಗಾಗಿ ಅರಣ್ಯ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಇವರಿಗೆ ಪೊಲೀಸ್​​ ಸಿಬ್ಬಂದಿಯೂ ಸಾಥ್​​ ನೀಡಿದ್ದು, ತಡರಾತ್ರಿ 3 ಗಂಟೆಯವರೆಗೆ ಹುಡುಕಾಡಿದರೂ ನಾಪತ್ತೆಯಾದ
ಯುವತಿಯ ಸುಳಿವು ಸಿಕ್ಕಿಲ್ಲ. ನಿನ್ನೆ ತಾನು ದಾರಿ ತಪ್ಪಿರುವುದಾಗಿ ತಮ್ಮ ಹೋಂಸ್ಟೇ ಮಾಲೀಕನಿಗೆ ಕರೆ
ಮಾಡಿ ಶರಣ್ಯಾ ಹೇಳಿದ್ದಳು. ಅದಾದ ಬಳಿಕ ಶರಣ್ಯ ಮೊಬೈಲ್‌ ನಾಟ್ ರೀಚೇಬಲ್ ಆಗಿದೆ

Advertisement
