# ರಾತ್ರೋರಾತ್ರಿ ವರ್ಗಾವಣೆಯಾದ 8 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ

- Link: https://hosakannada.com/news/karnataka-govt-stay-order-to-the-tranfer-of-seven-ips-officer/
- Published: 2023-09-05T19:38:57+00:00
- Author: Praveen Chennavara

ಬೆಂಗಳೂರು : ರಾತ್ರೋ ರಾತ್ರಿ ಬರೋಬ್ಬರಿ 35 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ 
ಮಾಡಿದ್ದು, ಈ ಪೈಕಿ 8 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸರಕಾರ ತಡೆ ನೀಡಿ ಆದೇಶ ಹೊರಡಿಸಿದೆ.

Sponsored

ಈ ಕುರಿತು ಕೂಡಲೇ ಡಿಜಿ- ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆಯೂ ಸರಕಾರ ಸೂಚನೆ ನೀಡಿದೆ.

Advertisement

Advertisement

35 ಜನ ಐಪಿಎಸ್ ಅಧಿಕಾರಿಗಳಲ್ಲಿ ಇದೀಗ 8 ಅಧಿಕಾರಿಗಳಿಗೆ ತಡೆ ನೀಡಿದೆ.

ಅಕ್ಷಯ್ ಮಚ್ಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್, ಶೇಖರ್ ಟೆಕ್ಕಣನವರ್, ಸೈದುಲ್ಲಾ ಅಡಾವತ್,
ನಿರಂಜನ್ ರಾಜೇ ಅರಸ್, ಬದರೀನಾಥ್ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.

ಸಂಜೀವ್ ಪಾಟೀಲ್ ವರ್ಗಾವಣೆಗೂ ರಾಜ್ಯ ಸರ್ಕಾರ ತಡೆ ನೀಡಿದ್ದು, ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ
ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

Advertisement
