# ಕರ್ನಾಟಕ ಬಜೆಟ್‌: ಅಬಕಾರಿ ನೀತಿಗೆ ಮೇಜರ್‌ ಸರ್ಜರಿ

- Link: https://hosakannada.com/news/karnataka-budget-major-surgery-on-excise-policy/
- Published: 2026-03-06T13:19:50+00:00
- Author: ಹೊಸಕನ್ನಡ ನ್ಯೂಸ್

ಕರ್ನಾಟಕ ಬಜೆಟ್‌: ಅಬಕಾರಿ ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮತ್ತು ತೆರಿಗೆ ಪದ್ಧತಿಯನ್ನು
ವಿಶ್ವದರ್ಜೆಗೆ ಏರಿಸುವ ಮಹತ್ವದ ನಿರ್ಧಾರಗಳನ್ನು ಈ ಬಾರಿ ಬಜೆಟ್‌ನಲ್ಲಿ ಮಂಡನೆ ಮಾಡಲಾಗಿದೆ. 60 
ವರ್ಷದ ಹಳೆಯದಾದ ಅಬಕಾರಿ ಕಾಯ್ದೆಗೆ ಮೇಜರ್‌ ಸರ್ಜರಿ ಮಾಡಲಾಗಿದ್ದು, ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ
ಬಿಸಿ ತಟ್ಟದಂತೆ ಹೊಸ ಸುಧಾರಣೆ ಮಾಡಲಾಗಿದೆ.

Sponsored

ಮದ್ಯದ ಮಾರಾಟ ಬೆಲೆಯ ಮೇಲೆ ಇಲ್ಲಿಯವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಎಪ್ರಿಲ್‌ 2026 
ರಿಂದ ಜಾಗತಿಕ ಮಟ್ಟದ ʼಗೋಲ್ಡ್‌ ಸ್ಟ್ಯಾಂಡರ್ಡ್‌ʼ ಎನಿಸಿಕೊಂಡಿರುವ ʼಮದ್ಯದ ಅಂಶ ಆಧಾರಿತ ತೆರಿಗೆʼ
ಪದ್ಧತಿಯನ್ನು ಜಾರಿಗೆ ತರಲಾಗುವುದು. ಅಂದರೆ Alcohol in Beverage -AIB. ಆಲ್ಕೋಹಾಲ್‌ ಪ್ರಮಾಣಕ್ಕೆ
ಅನುಗುಣವಾಗಿ ಇನ್ನು ಮುಂದೆ ತೆರಿಗೆ ವಿಧಿಸಲಾಗುತ್ತದೆ.

Advertisement

Advertisement

ಈ ಬೆಲೆ ನಿರ್ಧಾರಕ್ಕೆ ಸರಕಾರವು ಹಿಂದೆ ಸರಿದಿದ್ದು, ಮಾರುಕಟ್ಟೆಯ ಆಧಾರದ ಮೇಲೆ ಬೆಲೆ ನಿಗದಿಪಡಿಸುವ
ಅಧಿಕಾರವನ್ನು ಸಂಪೂರ್ಣವಾಗಿ ಮದ್ಯ ಉತ್ಪಾದಕರಿಗೇ ನೀಡಿದೆ. 16 ತೆರಿಗೆ ಸ್ಲ್ಯಾಬ್‌ಗಳನ್ನು ಕೇವಲ 
8 ಸ್ಲ್ಯಾಬ್‌ಗಳಿಗೆ ಇಳಿಸುವ ಮೂಲಕ ವ್ಯವಸ್ಥೆಯನ್ನು ಸರಳ ಮಾಡಲಾಗಿದೆ.

ಬ್ಲಾಕ್‌ಚೈನ್‌ ಡಿಜಿಟಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಯ ಮೂಲಕ ಮದ್ಯದ ಚಲನವಲನ ಮೇಲೆ ನಿಗಾ ಇಡುವುದು,
ಮದ್ಯ ರವಾನೆಯ ವೇಳೆ ಹಳೆಯ ಕಾಲದ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ ಫೆನ್ಸ್ಡ್‌ ಇ ಲಾಕ್‌ ವ್ಯವಸ್ಥೆ
ಅಳವಡಿಸಲಾಗುವುದು. ಈ ಮೂಲಕ ಮದ್ಯದ ಅಕ್ರಮ ಸಾಗಾಟಕ್ಕೆ ಬ್ರೇಕ್‌ ಬೀಳಲಿದೆ.

5 ವರ್ಷಗಳ ಸನ್ನದು: ಮದ್ಯದ ಸನ್ನದುಗಳ (Licenses) ಮಾನ್ಯತೆಯನ್ನು 1 ವರ್ಷದಿಂದ 5 ವರ್ಷಗಳಿಗೆ ಏರಿಸಲಾಗಿದೆ.

ಆನ್‌ಲೈನ್ ಅನುಮೋದನೆ: ಅನುಮೋದನೆ ಪ್ರಕ್ರಿಯೆಯನ್ನು 16 ಹಂತಗಳಿಂದ 7 ಹಂತಗಳಿಗೆ ಇಳಿಸಲಾಗಿದ್ದು, 
2 ದಿನಗಳಲ್ಲಿ ಅನುಮತಿ ದೊರೆಯಲಿದೆ. 24×7 ಕಾರ್ಯಾಚರಣೆ: ಡಿಸ್ಟಿಲರಿಗಳು ಮತ್ತು ಬ್ರೂವರಿಗಳಿಗೆ ದಿನದ
24 ಗಂಟೆಯೂ ಕಾರ್ಯಾಚರಣೆ ಮಾಡಲು ಅವಕಾಶ ನೀಡಲಾಗಿದೆ. ಡಿಜಿಟಲ್ ಕೌನ್ಸಿಲಿಂಗ್: ಭ್ರಷ್ಟಾಚಾರ ತಡೆಯಲು
ಅಬಕಾರಿ ಅಧೀಕ್ಷಕರ ವರ್ಗಾವಣೆಯನ್ನು ಡಿಜಿಟಲ್ ಕೌನ್ಸಿಲಿಂಗ್ ಮೂಲಕ ಮಾಡಲಾಗುವುದು.

ರಾಜ್ಯದಲ್ಲಿ ವೈನ್ ಪ್ರವಾಸೋದ್ಯಮ ಮಾದರಿಯಲ್ಲಿ ಡಿಸ್ಟಿಲರಿಗಳು ಮತ್ತು ಬ್ರೂವರಿಗಳಲ್ಲಿ ಪ್ರವಾಸಿಗರಿಗೆ
ಮದ್ಯ ಸವಿಯಲು (Tasting) ಮತ್ತು ಅಲ್ಲಿ ತಯಾರಾದ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಅವಕಾಶ ನೀಡಲಾಗಿದೆ.
ಇದು ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ನೀಡಲಿದೆ.

Advertisement
