# ಡಿಸೆಂಬರ್ 31 ರಂದು ಸ್ತಬ್ಧವಾಗಲಿದೆ ಕರ್ನಾಟಕ !!| ಕರ್ನಾಟಕ ಬಂದ್ ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

- Link: https://hosakannada.com/news/karnataka-bandh/
- Published: 2021-12-22T13:03:13+00:00
- Author: ಹೊಸಕನ್ನಡ

ಎಂಇಎಸ್‌ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಡಿಸೆಂಬರ್‌ 31 ರಂದು ಕರ್ನಾಟಕ ಬಂದ್‌ಗೆ ಕನ್ನಡಪರ 
ಸಂಘಟನೆಗಳು ಕರೆ ನೀಡಿವೆ.

Sponsored

ಖಾಸಗಿ ಹೋಟೆಲ್‌ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ
ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

Advertisement

ಡಿಸೆಂಬರ್ 31 ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್‌ ಆಗಲಿದೆ. ಬಂದ್‌ ದಿನ
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಟೌನ್‌ಹಾಲ್‌ನಿಂದ ಬೃಹತ್‌ ಮೆರವಣಿಗೆ ನಡೆಯಲಿದೆ. ಹೋರಾಟಕ್ಕೆ ಚಲನಚಿತ್ರ
ನಟರೂ ಬೆಂಬಲ ಸೂಚಿಸಲಿದ್ದಾರೆ.

Advertisement
